ಕಿಶ್ತ್ವಾರ್ (ಜಮ್ಮು ಮತ್ತು ಕಾಶ್ಮೀರ): ನಿರ್ಮಾಣ ಹಂತದಲ್ಲಿರುವ ರಾಟಲ್ ಪವರ್ ಪ್ರಾಜೆಕ್ಟ್ನ ಸ್ಥಳದಲ್ಲಿ ಶನಿವಾರ ಸಂಭವಿಸಿದ ಭೂಕುಸಿತದಲ್ಲಿ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದೆ. ಒಟ್ಟು ನಾಲ್ಕು ಮೃತದೇಹಗಳನ್ನು ಹೊರ ತೆಗೆಯಲಾಗಿದ್ದು, ಆರು ಮಂದಿ ಗಾಯಗೊಂಡವರನ್ನು ರಕ್ಷಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ನ ಡೆಪ್ಯುಟಿ ಕಮಿಷನರ್ ದೇವಾಂಶ್ ಯಾದವ್ ಹೇಳಿದ್ದಾರೆ.
“ನಿರ್ಮಾಣ ಹಂತದಲ್ಲಿರುವ ರಾಟಲ್ ಪವರ್ ಪ್ರಾಜೆಕ್ಟ್ ಸ್ಥಳದಲ್ಲಿ ಉಂಟಾದ ಭೂ ಕುಸಿತದಲ್ಲಿ ಮೊದಲು ಓರ್ವ ವ್ಯಕ್ತಿ ಸಿಲುಕಿದ್ದ. ಅದನ್ನು ಕಂಡ ಉಳಿದ ಕಾರ್ಮಿಕರು, ಆತನನ್ನು ರಕ್ಷಿಸಲು ಹೋಗಿ ಅವರೂ ಕೂಡ ಸಿಲುಕಿದರು. ಈ ವೇಳೆ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು ಕೆಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Deeply anguished by mishap at Drabshalla- Ratle hydroelectric project. My thoughts are with those who have lost their loved ones. Prayers for early recovery of injured. Army,SDRF & police are carrying out rescue operations. Dist Admin directed to provide all necessary assistance.
— Office of LG J&K (@OfficeOfLGJandK) October 29, 2022
BIG NEWS: ʻದೇಶದ ಯುವಕರಿಗೆ 10 ಲಕ್ಷ ಉದ್ಯೋಗಗಳನ್ನು ಒದಗಿಸಲು ಕೇಂದ್ರ ಕೆಲಸ ಮಾಡುತ್ತಿದೆʼ: ಪ್ರಧಾನಿ ಮೋದಿ
BIG NEWS: ʻದೇಶದ ಯುವಕರಿಗೆ 10 ಲಕ್ಷ ಉದ್ಯೋಗಗಳನ್ನು ಒದಗಿಸಲು ಕೇಂದ್ರ ಕೆಲಸ ಮಾಡುತ್ತಿದೆʼ: ಪ್ರಧಾನಿ ಮೋದಿ