ಚೈಬಾಸಾ (ಜಾರ್ಖಂಡ್): ಶಿಕ್ಷಕನೊಬ್ಬ ಶಾಲೆ ತರಗತಿಯೊಳಗೆ ವಿದ್ಯಾರ್ಥಿನಿಯರಿಗೆ ಅಶ್ಲೀಲ ವೀಡಿಯೊಗಳನ್ನು ತೋರಿಸಿ, ಅವರನ್ನು ಅನುಚಿತವಾಗಿ ಮುಟ್ಟಿದ್ದಾನೆ. ಈ ಸುದ್ದಿ ತಿಳಿದ ಗ್ರಾಮಸ್ಥರು ಶಿಕ್ಷಕನ ವಿರುದ್ಧ ರೊಚ್ಚಿಗೆದ್ದು, ಅವನ ಮುಖಕ್ಕೆ ಮಸಿ ಬಳಿದು ಶೂಳಿಂದ ಮಾಡಿದ ಮಾಲೆ ಹಾಕಿ ಥಳಿಸಿರುವ ಘಟನೆ ಜಾರ್ಖಂಡ್ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ನಡೆದಿದೆ.
ನೊಮುಂಡಿ ಬ್ಲಾಕ್ನ ಮೇಲ್ದರ್ಜೆಗೇರಿದ ಮಿಡ್ಲ್ ಸ್ಕೂಲ್ನ ಆರು ವಿದ್ಯಾರ್ಥಿನಿಯರು ತಮ್ಮ ಪೋಷಕರಿಗೆ ಶಿಕ್ಷಕನು ಅಸಭ್ಯ ವೀಡಿಯೊಗಳನ್ನು ತೋರಿಸಿದ್ದಾರೆ ಮತ್ತು ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂದು ತಿಳಿಸಿದ್ದಾರೆ. ಇದರಿಂದ ಕೋಪಗೊಂಡ ಪೂಷಕರು ಹಾಗೂ ಗ್ರಾಮಸ್ಥರು ಶಿಕ್ಷನ ಮುಖಕ್ಕೆ ಮಸಿ ಬಳಿದು ಬೂಟುಗಳಿಂದ ಹಾರ ಹಾಕಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆ ನಂತ್ರ ಗ್ರಾಮಸ್ಥರು ಆರೋಪಿ ವಿರುದ್ಧ ಬುಧವಾರ ಲಿಖಿತ ದೂರು ನೀಡಿದ್ದು, ಆರೋಪಿಯನ್ನು ಜೈಲಿಗೆ ಕಳುಹಿಸುವಂತೆ ಒತ್ತಾಯಿಸಿ ಪ್ರತಿಭಟನಾಕಾರರು ಪೊಲೀಸ್ ಔಟ್ಪೋಸ್ಟ್ ಹೊರಗೆ ಧರಣಿ ನಡೆಸಿದ್ದಾರೆ.
BIG NEWS: ಜ. 2023 ರಿಂದ ಕ್ಲೌಡ್ ಗೇಮಿಂಗ್ ಸೇವೆ ʻಗೂಗಲ್ ಸ್ಟೇಡಿಯಾʼ ಸ್ಥಗಿತಗೊಳಿಸಲು Google ನಿರ್ಧಾರ… ಕಾರಣ?
BIGG NEWS: ಜೋಡಿಸುವ ಯಾತ್ರೆ ಅಲ್ಲ ಇದು ಒಡೆಯುವ ಯಾತ್ರೆ; ಕಾಂಗ್ರೆಸ್ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ