ಜಾರ್ಖಂಡ್: ರಿಕವರಿ ಏಜೆಂಟ್ ವಶಪಡಿಸಿಕೊಂಡ ಟ್ರ್ಯಾಕ್ಟರ್ಗೆ ಸಿಲುಕಿ 27 ವರ್ಷದ ಗರ್ಭಿಣಿ ಮಹಿಳೆ ಸಾವನ್ನಪ್ಪಿರುವ ಘಟನೆ ಜಾರ್ಖಂಡ್ನ ಹಜಾರಿಬಾಗ್ ಜಿಲ್ಲೆಯಲ್ಲಿ ಗುರುವಾರ ನಡೆದಿದೆ.
ಈ ಮೂರು ತಿಂಗಳ ಗರ್ಭಿಣಿಯು ಇಚಾಕ್ ಪೊಲೀಸ್ ಠಾಣಾ ವ್ಯಾಪ್ತಿಯ ಬರಿಯಾನಾಥದ ವಿಕಲಚೇತನ ರೈತ ಮಿಥಿಲೇಶ್ ಮೆಹ್ತಾ ಅವರ ಪುತ್ರಿಯಾಗಿದ್ದಾರೆ. ಈಕೆ ಸಾವಿಗೆ ಸಂಬಂಧಿಸಿದಂತೆ ಖಾಸಗಿ ಹಣಕಾಸು ಕಂಪನಿಯ ರಿಕವರಿ ಏಜೆಂಟ್ ಮತ್ತು ಮ್ಯಾನೇಜರ್ ಸೇರಿದಂತೆ ನಾಲ್ವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ರತನ್ ಚೋಠೆ ತಿಳಿಸಿದ್ದಾರೆ.
ಏನಿದು ಘಟನೆ?
ಟ್ರ್ಯಾಕ್ಟರ್ ಖರೀದಿಸಲು ಸಾಲ ಪಡೆದಿರುವ ಮಹೀಂದ್ರಾ ಫೈನಾನ್ಸ್ ಕಂಪನಿಯಿಂದ ಮೆಹ್ತಾಗೆ ಗುರುವಾರ ತಕ್ಷಣವೇ ಬಾಕಿ ಉಳಿದಿರುವ 1.3 ಲಕ್ಷ ರೂ.ಗಳನ್ನು ಪಾವತಿಸುವಂತೆ ತನ್ನ ಮೊಬೈಲ್ ಫೋನ್ಗೆ ಸಂದೇಶವೊಂದು ಬಂದಿದೆ.
ಹಣ ನೀಡದಿದ್ದಲ್ಲಿ ಟ್ರ್ಯಾಕ್ಟರ್ ಅನ್ನು ತೆಗೆದುಕೊಂಡು ಹೋಗುವುದಾಗಿ ಕಂಪನಿಯ ಬೆದರಿಕೆ ಹಾಕಿತ್ತು. ಸಂದೇಶವನ್ನು ಸ್ವೀಕರಿಸಿದ ನಂತರ ವ್ಯಕ್ತಿ ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದು, ರಿಕವರಿ ಏಜೆಂಟ್ ಆಗಲೇ ಮೆಹ್ತಾನ ಟ್ರ್ಯಾಕ್ಟರ್ ಅನ್ನು ಓಡಿಸುತ್ತಿರುವುದನ್ನು ಕಂಡು ಬಂತು.
ಇದನ್ನು ಕಂಡ ಮೆಹ್ತಾ ಬಾಕಿ ಹಣ ನೀಡಲು ನಾನು ಸಿದ್ಧನಿದ್ದೇನೆ ಎಂದು ಹೇಳಿದರೂ ರಿಕವರಿ ಏಜೆಂಟ್ ಮೆಹ್ತಾನ ಮನವಿಯನ್ನು ಕೇಳಲು ನಿರಾಕರಿಸಿ ಟ್ರ್ಯಾಕ್ಟರ್ ಅನ್ನು ಓಡಿಸುತ್ತಲೇ ಇದ್ದ. ಈ ವೇಳೆ ಸ್ಥಳಕ್ಕಾಗಮಿಸಿದ ಮೆಹ್ತಾನ ಗರ್ಭಿಣಿ ಮಗಳು ಟ್ರ್ಯಾಕ್ಟರ್ ಅನ್ನು ನಿಲ್ಲಿಸುವಂತೆ ಹೇಳಲು ಅದರಹಿಂದಯೇ ಓಡಿದ್ದಾಳೆ. ಈ ವೇಳೆ ಆಕೆ ಟ್ರ್ಯಾಕ್ಟರ್ ಚಕ್ರಗಳ ಅಡಿಗೆ ಸಿಲುಕಿ ಸಾವನ್ನಪ್ಪಿದ್ದಾಳೆ.
OMG: ಜೀವನದಲ್ಲಿ ʻಶಾಂತಿʼಗಾಗಿ 43 ವರ್ಷಗಳಲ್ಲಿ 53 ಮಹಿಳೆಯರನ್ನ ಮದುವೆಯಾದ ಭೂಪ!