ಬೆಂಗಳೂರು: ರಾಜ್ಯದಲ್ಲಿ ಜೆಡಿಎಸ್ ಅಸ್ತಿತ್ವ ಕಳೆದುಕೊಂಡಿದೆ. ಹೀಗಾಗಿ ಜೆಡಿಎಸ್ ಪಕ್ಷದ ಕತೆ ಮುಗಿದ ಅಧ್ಯಾಯ ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ಭವಿಷ್ಯ ನುಡಿದಿದೆ.
ಇಂದು ಎಕ್ಸ್ ಮಾಡಿರುವಂತ ಕರ್ನಾಟಕ ಕಾಂಗ್ರೆಸ್, ರಾಜ್ಯದಲ್ಲಿ ಅಸ್ತಿತ್ವ ಕಳೆದುಕೊಂಡ ಜೆಡಿಎಸ್ ಪಕ್ಷದ ಕತೆ ಮುಗಿದ ಮುಗಿದ ಅಧ್ಯಾಯ. ಆದರೆ ಜೆಡಿಎಸ್ ಪಕ್ಷದ ಐಟಿ ಸೆಲ್ ಅಸ್ತಿತ್ವ ತೋರಿಸಿಕೊಳ್ಳಲು ಹೆಣಗಾಡುತ್ತಿದೆ ಎಂದಿದೆ.
ಬಿಜೆಪಿಯ 40% ಕಮಿಷನ್ ಸರ್ಕಾರದಿಂದಾಗಿ ರಾಜಕಾಲುವೆಗಳ ಒತ್ತುವರಿಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ತನ್ನ ಕಮಿಷನ್ ಕಳ್ಳಾಟವನ್ನು ಮುಂದುವರೆಸಿತ್ತು, ನಮ್ಮ ಸರ್ಕಾರ ರಾಜಕಾಲುವೆಗಳ ಒತ್ತುವರಿಯನ್ನು ಮುಲಾಜಿಲ್ಲದೆ ತೆರವು ಮಾಡಲಿದೆ ಎಂದು ಹೇಳಿದೆ.
ಚರಂಡಿ, ಕಾಲುವೆ ಸೇರಿದಂತೆ ನೀರು ಹರಿದು ಹೋಗುವ ಎಲ್ಲಾ ಮಾರ್ಗಗಳನ್ನು ಸ್ವಚ್ಛಗೊಳಿಸಿ ಮಳೆಗಾಲ ಎದುರಿಸಲು ಸಿದ್ದವಾಗಿದೆ ಎಂದು ತಿಳಿಸಿದೆ.
ಜೆಡಿಎಸ್ ನಾಯಕರೇ, ಅಂದಹಾಗೆ ನಿಮ್ಮ ಪ್ರಜ್ವಲ್ ರೇವಣ್ಣ ಎಲ್ಲಿ? ಬ್ರದರ್ ಸ್ವಾಮಿಗಳ ಜೇಬಲ್ಲಿದ್ದ ಪೆನ್ ಡ್ರೈವ್ ಎಲ್ಲಿ ಹೋಯ್ತು? ನಿಮ್ಮ ನಾಯಕರು ಸಂತ್ರಸ್ತ ಮಹಿಳೆಯರನ್ನು ಸಂತೈಸುವುದು ಯಾವಾಗ? ಎಂದು ಕೇಳಿದೆ.
ರಾಜ್ಯದಲ್ಲಿ ಅಸ್ತಿತ್ವ ಕಳೆದುಕೊಂಡ ಜೆಡಿಎಸ್ ಪಕ್ಷದ ಕತೆ ಮುಗಿದ ಮುಗಿದ ಅಧ್ಯಾಯ.
ಆದರೆ ಜೆಡಿಎಸ್ ಪಕ್ಷದ ಐಟಿ ಸೆಲ್ ಅಸ್ತಿತ್ವ ತೋರಿಸಿಕೊಳ್ಳಲು ಹೆಣಗಾಡುತ್ತಿದೆ!ಬಿಜೆಪಿಯ 40% ಕಮಿಷನ್ ಸರ್ಕಾರದಿಂದಾಗಿ ರಾಜಕಾಲುವೆಗಳ ಒತ್ತುವರಿಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ತನ್ನ ಕಮಿಷನ್ ಕಳ್ಳಾಟವನ್ನು ಮುಂದುವರೆಸಿತ್ತು,
ನಮ್ಮ ಸರ್ಕಾರ… pic.twitter.com/7vP78KiGXm
— Karnataka Congress (@INCKarnataka) May 22, 2024
ಆಹಾರ ಪ್ರಾಧಿಕಾರದ ಪರೀಕ್ಷೆಗಳಲ್ಲಿ ‘MDH, ಎವರೆಸ್ಟ್ ಮಸಾಲೆ ಮಾದರಿ’ಗಳು ಉತ್ತೀರ್ಣ : ಮೂಲಗಳು
BREAKING : ವಿಜಯಪುರದಲ್ಲಿ ಘೋರ ದುರಂತ : ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕರ ಸಾವು