ಮಂಡ್ಯ: ಜಿಲೆಯ ಕೆಆರ್ ಪೇಟೆಯಲ್ಲಿ ಜೆಡಿಎಸ್ ಪಂಚರತ್ನ ಯಾತ್ರೆಯ ಕೈಗೊಂಡಿದೆ. ಈ ವೇಳೆ ಮುಖಂಡರು ಸ್ಟೀಲ್ ಬಿಂದಿಗೆಗಳನ್ನು ಮಹಿಳೆಯರಿಗೆ ಉಡುಗೊರೆ ನೀಡಿದ್ದಾರೆ.
BREAKING NEWS: 5 ಖಾಸಗಿ ವಿವಿಗಳ ಸ್ಥಾಪನೆಗೆ ಅನುಮೋದನೆ ಬಗ್ಗೆ ಸಂಪುಟ ಸಭೆ ಚರ್ಚೆ; ಸಿಎಂ ಬೊಮ್ಮಾಯಿ
ಆದರೆ ಗೌರವಯುತವಾಗಿ ಬಿಂದಿಗೆಗಳನ್ನು ನೀಡದೇ ಕಾರ್ಯಕರ್ತರು ಬೇಕಾಬಿಟ್ಟಿ ಜನರತ್ತ ಎಸೆದಿದ್ದಾರೆ. ಜೆಡಿಎಸ್ ಕಾರ್ಯಕರ್ತರ ಈ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.ಭಾನುವಾರ ಕೆಆರ್ ಪೇಟೆಯಲ್ಲಿ ನಡೆದ ಪಂಚರತ್ನ ರಥಯಾತ್ರೆ ಕಾರ್ಯಕ್ರಮದಲ್ಲಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಂಜು ಪರವಾಗಿ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಅವರು ಪ್ರಚಾರ ಮಾಡಿದ್ದಾರೆ.
BREAKING NEWS: 5 ಖಾಸಗಿ ವಿವಿಗಳ ಸ್ಥಾಪನೆಗೆ ಅನುಮೋದನೆ ಬಗ್ಗೆ ಸಂಪುಟ ಸಭೆ ಚರ್ಚೆ; ಸಿಎಂ ಬೊಮ್ಮಾಯಿ
ಇದಕ್ಕೂ ಮುನ್ನ ಹೆಚ್ಡಿಕೆಗೆ ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಳ್ಳಲಾಗಿತ್ತು.
ಬಿಂದಿಗೆಗಳನ್ನು ಗೌರವಯುತವಾಗಿ ನೀಡದೇ ಕಾರ್ಯಕರ್ತರು ಜನರತ್ತ ಎಸೆದಿದ್ದಾರೆ. ಬಿಸ್ಕೆಟ್ನಂತೆ ಎಸೆಯುತ್ತಿದ್ದ ಬಿಂದಿಗೆಗಳನ್ನು ಕ್ಯಾಚ್ ಹಿಡಿಯಲು ಜನರು ಕ್ಯಾಂಟರ್ ಹಿಂದೆ ಮುಗಿಬಿದ್ದಿದ್ದಾರೆ.