ಬೆಂಗಳೂರು : ಈ ಪ್ರತಿಭಟನೆ ಇವತ್ತು ಬೆಂಗಳೂರು ನಗರದಲ್ಲಿ ಪ್ರಾರಂಭ ಮಾಡಿದ್ದೀವಿ. ಇದು ಇಡೀ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ನಮ್ಮ ಹೋರಾಟ ಮುದುವರೆಯುತ್ತೆ ಎಂದು ನಿಖಿಲ್ ಕುಮಾರಸ್ವಾಮಿ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಗೃಹಲಕ್ಷ್ಮಿ ಹಣ ಬಿಡುಗಡೆ ಆಗ್ರಹಿಸಿ ನಾಳೆ (ಮಂಗಳವಾರ ) ನಮ್ಮ ಪಕ್ಷದ ಶಾಸಕರು, ವಿಧಾನಪರಿಷತ್ ಸದ್ಯಸರು ಎಲ್ಲರೂ ಸೇರಿ ವಿಧಾನಸೌಧದ ಮುಂಭಾಗ ಇರುವ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಿದ್ದಾರೆ.
ಗೃಹಲಕ್ಷ್ಮೀ ಹಣ ಬಿಡುಗಡೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಂತರ ಮಾಧ್ಯಮಗಳ ಜತೆ ಮಾತನಾಡಿದ ನಿಖಿಲ್ ಅವರು ; ನಮ್ಮ ಹೋರಾಟ ಮುದುವರೆಯುತ್ತೆ ಇಲ್ಲಿಗೆ ನಿಲ್ಲುವುದಿಲ್ಲ, ಇಡೀ ರಾಜ್ಯಾದ್ಯಂತ ನಮ್ಮ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಹೋರಾಟದ ಕರೆ ಕೊಟ್ಟರು.
ನಾಡಿನ ಜನತೆಯ ಪರವಾಗಿ ರಾಜ್ಯ ಸರ್ಕಾರಕ್ಕೆ ಪ್ರಶ್ನೆ ಮಾಡ್ತೀನಿ ಗೃಹಲಕ್ಷ್ಮಿ ಯಾವ ದಿನಾಂಕಕ್ಕೆ ಕೊಡ್ತೀರಾ.? ಕ್ಯಾಲೆಂಡರ್ ನಲ್ಲಿ ಯಾವ ದಿನಾಂಕಕ್ಕೆ ಜಮೆ ಮಾಡ್ತೀರಾ ಎಂದು ಉತ್ತರ ಕೊಡಬೇಕು ಎಂದು ನಿಖಿಲ್ ಅವರು ಒತ್ತಾಯಿಸಿದರು.
ಗ್ಯಾರಂಟಿಗಳು ಚುನಾವಣೆಯಲ್ಲಿ ಹೊತ್ತಿನಲ್ಲಿ ಮಾತ್ರ ಬರುತ್ತೆ, ಉಪಚುನಾವಣೆಯಲ್ಲಿ ಏನಾಯ್ತು. ಭವಿಷ್ಯ ರಾಜ್ಯದ ಜನ ಕೇಳ್ತಿದ್ದಾರೆ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಮಾಡಿದ್ರೆ ಆ ಸಂದರ್ಭದಲ್ಲಿ ಭವಿಷ್ಯ ಹಣ ಬಿಡುಗಡೆಯಾಗಬಹುದು ಎಂದು ಎಂದರು.
BREAKING : ಬೆಂಗಳೂರಲ್ಲಿ ಸೆಕ್ಯೂರಿಟಿ ಗಾರ್ಡ್ ಹತ್ಯೆ ಪ್ರಕರಣ : ಆರೋಪಿ ಡೆಲಿವರಿ ಬಾಯ್ ಅರೆಸ್ಟ್!
ರಾಜ್ಯದ 9 ವಿಶ್ವವಿದ್ಯಾಲಯ ಮುಚ್ಚದಿರಿ: ರಾಜ್ಯಪಾಲರಿಗೆ ಬಿಜೆಪಿ ನಿಯೋಗ ಮನವಿ
BREAKING : ಪತ್ನಿಯ ಕಾಟಕ್ಕೆ ಮತ್ತೊಂದು ಬಲಿ : ಕಲಬುರ್ಗಿಯಲ್ಲಿ ನೇಣು ಬಿಗಿದುಕೊಂಡು ಪತಿ ಆತ್ಮಹತ್ಯೆ ಶರಣು!