ಬೆಂಗಳೂರು: ಕೇಂದ್ರ ಸರಕಾರದ ( Union Government ) ರಾಜ್ಯದಲ್ಲಿ ಹಿಂದಿ ದಿವಸ್ ಆಚರಣೆ ( Hindi Diwas Celebration ) ಮಾಡುತ್ತಿರುವ ಬಗ್ಗೆ ವಿಧಾನಸಭೆಯಲ್ಲಿ ಜೆಡಿಎಸ್ ಶಾಸಕರ ( JDS MLA ) ಆಕ್ರೋಶಕ್ಕೆ ಕಾರಣವಾಯಿತು. ಅಲ್ಲದೆ, ತಮ್ಮ ಪಕ್ಷದ ಶಾಸಕರ ಒತ್ತಾಯದ ಬಗ್ಗೆ ಮಾತನಾಡಿದ ಪಕ್ಷದ ಶಾಸಕಾಂಗ ನಾಯಕ ಹೆಚ್.ಡಿ.ಕುಮಾರಸ್ವಾಮಿ ( Farmer CM HD Kumaraswamy ) ಅವರು, ಹಿಂದಿ ಹೆಸರಿನಲ್ಲಿ ಕನ್ನಡ ಭಾಷೆಯ ಮೇಲೆ ಆಗುತ್ತಿರುವ ದಬ್ಬಾಳಿಕೆಯ ಬಗ್ಗೆ ಬೇಸರ ವ್ಯಕ್ತಪಡಿಸಿದರು.
BIGG NEWS: ಮೂರವರೆ ಗಂಟೆ ಹೃದಯ ಬಡಿತ ನಿಷ್ಕ್ರೀಯ : ಪವಾಡ ಸಾದೃಶ್ಯವಾಗಿ ಬದುಕಿದ ಮಹಿಳೆ, ವೈದ್ಯರಿಗೆ ಶ್ಲಾಘನೆ
ಜೆಡಿಎಸ್ ಶಾಸಕರು ಪ್ರತಿಭಟನೆ ನಡೆಸಿದ್ದನ್ನು ಸಮರ್ಥನೆ ಮಾಡಿಕೊಂಡು ಮಾತನಾಡಿದ ಮಾಜಿ ಮುಖ್ಯಮಂತ್ರಿಗಳು, ನಮ್ಮ ಸದಸ್ಯರು ಇಂದು ಹಿಂದಿ ದಿವಸ್ ಆಚರಣೆ ವಿರುದ್ಧ ಸದನದ ಹೊರಗೆ ಧರಣಿ ನಡೆಸಿದರು. ನಮ್ಮ ಕನ್ನಡ ಭಾಷೆಗೆ ಧಕ್ಕೆ ಬರಬಾರದು ಎಂದು ಸದನದಲ್ಲಿ ಗಮನ ಸೆಳೆಯಲು ಈ ವಿಷಯ ಪ್ರಸ್ತಾಪ ಮಾಡಿದ್ದಾರೆ. ಅದನ್ನು ಹೊರತುಪಡಿಸಿ ಸದನದ ಸಮಯ ಹಾಳು ಮಾಡುವ ಉದ್ದೇಶ ನಮ್ಮ ಶಾಸಕರಿಗಿಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದರು.
BREAKING NEWS: ಇಂದು ಮುರುಘಾ ಶ್ರೀಗಳಿಗಿಲ್ಲ ಜಾಮೀನು: ಸೆ.16ಕ್ಕೆ ಅರ್ಜಿ ವಿಚಾರಣೆ ಮುಂದೂಡಿಕೆ | Murugha Sri
ನಮ್ಮ ಪಕ್ಷದ ನಿಲುವು ಇಷ್ಟೇ. ನಮ್ಮ ದೇಶದಲ್ಲಿ ಹಲವಾರು ಭಾಷೆಗಳಿವೆ. 56ಕ್ಕೂ ಹೆಚ್ಚು ಭಾಷೆಗಳಿರುವ ಈ ರಾಷ್ಟ್ರದಲ್ಲಿ ಹಿಂದಿ ಕೂಡ ಒಂದು ಭಾಷೆ ಅಷ್ಟೇ. ಆದರೆ ಒಂದು ಭಾಷೆ, ಒಂದು ರಾಷ್ಟ್ರ ಎಂದು ಮಾಡಲು ಹೊರಟಿದ್ದಾರೆ. ಎಲ್ಲ ಭಾಷೆಗಳಿಗೆ ಅವುಗಳದ್ದೇ ಆದ ಇತಿಹಾಸ ಇದೆ. ಆ ದೃಷ್ಟಿಯಿಂದ ಬಲವಂತದಿಂದ ಕತ್ತು ಹಿಸುಕುವ ಕೆಲಸ ಆಗಬಾರದು ಎಂಬುದು ನಮ್ಮ ಪಕ್ಷದ ಒತ್ತಾಯವಾಗಿದೆ ಎಂದು ಕುಮಾರಸ್ವಾಮಿ ಅವರು ನುಡಿದರು.
Good News : ಅನ್ನದಾತರಿಗೆ ಸಿಹಿ ಸುದ್ದಿ; ‘PM Kisan’ ಮುಂದಿನ ಕಂತಿನ ಸ್ಥಿತಿ ತಿಳಿಯಲು ಹೊಸ ‘ಸಂಖ್ಯೆ’ ಬಿಡುಗಡೆ
ಮಾಜಿ ಸಿಎಂ ಪ್ರಶ್ನೆಗೆ ಮುಖ್ಯಮಂತ್ರಿ ಬೊಮ್ಮಾಯಿ ಉತ್ತರ
ಮಾಜಿ ಮುಖ್ಯಮಂತ್ರಿಗಳು ಪ್ರಸ್ತಾಪ ಮಾಡಿದ ವಿಷಯಕ್ಕೆ ಉತ್ತರ ನೀಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು, ಭಾರತ ವಿವಿಧ ಭಾಷೆ, ಸಂಸ್ಕೃತಿ ಹೊಂದಿರುವ ದೇಶ. ಆದರೆ ಯಾವುದೇ ಒಂದು ಭಾಷೆಯನ್ನು ಮಾತ್ರ ಹೇರಲು ಇಲ್ಲಿ ಅವಕಾಶ ಇಲ್ಲ. ನಮ್ಮ ಪ್ರಧಾನಿಗಳು ಸ್ಪಷ್ಟವಾಗಿ ಹೇಳಿದ್ದಾರೆ. ಎಲ್ಲಾ ಪ್ರಾದೇಶಿಕ ಭಾಷೆಗಳು ರಾಷ್ಟ್ರೀಯ ಭಾಷೆಗಳೇ ಅಂತ ಹೇಳಿದ್ದಾರೆ. ಕನ್ನಡ ರಕ್ಷಣೆ ಮಾತ್ರವಲ್ಲ, ಬೆಳೆಸಲು ನಮ್ಮ ಪಕ್ಷ ಬದ್ದವಾಗಿದೆ. ಅದರಲ್ಲಿ ಆತಂಕ ಪಡುವ, ರಾಜಿಯಾಗುವ ಪ್ರಶ್ನೆ ಇಲ್ಲ ಎಂದರು.