ಬೆಂಗಳೂರು : ಚಳಿಗಾಲದ ಅಧಿವೇಶನದಲ್ಲಿ ಭತ್ಯೆ ಸ್ವೀಕರಿಸದಿರಲು ಶಾಸಕ ಕಂದಕೂರು ಪತ್ರ ಬರೆದಿದ್ದು ಯಾವುದೇ ರೀತಿಯ ಬಟ್ಟೆ ಬೇಡ ಎಂದು ವಿಧಾನ ಸಭೆ ಸ್ಪೀಕರ್ಗೆ ಪತ್ರ ಬರೆದಿದ್ದಾರೆ ಜೆಡಿಎಸ್ ಶಾಸಕ ಶರಣಗೌಡ ಕಂದುಕುರ್ ಸ್ಪೀಕರ್ ಗೆ ಪತ್ರ ಬರೆದಿದ್ದು ಯಾದಗಿರಿ ಜಿಲ್ಲೆಯ ಗುರುಮಠಕಲ್ ಶಾಸಕರಾಗಿರುವ ಶರಣಗೌಡ ಕಂದಕೂರು ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಮತ್ತೆ ಪಡೆಯುವುದಿಲ್ಲ ಎಂದು ಸ್ಪೀಕರ್ ಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಹೊರಗಿನಿಂದ ಊಟ ವಸ್ತುಗಳನ್ನು ತಂದು ಬಳಕೆಗೆ ಅನುಮತಿ ನೀಡಿ ಎಂದು ಮನವಿ ಮಾಡಿದ್ದಾರೆ. ಕಳೆದ ಬಾರಿಯ ಅಧಿವೇಶನದಲ್ಲಿ ನಾನು ಭತ್ಯೆ ಪಡೆಯಲ್ಲ ಅಂತ ಶಾಸಕ ಶರಣಗೌಡ ಕಂದಕೂರು ಹೇಳಿದ್ದರು. ಉತ್ತರ ಕರ್ನಾಟಕ ಭಾಗದ ಸಮಸ್ಯೆಯ ಬಗ್ಗೆ ಚರ್ಚಿಸಲು 25 ರಿಂದ 30 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತದೆ ಆದರೆ ಯಾವುದೇ ಪ್ರಯೋಜನವಾಗುತ್ತಿಲ್ಲ.
ಕಳೆದ ಅಧಿವೇಶನದಲ್ಲಿ ಕೈಗೊಂಡ ನಿರ್ಣಯಗಳ ಬಗ್ಗೆ ಇದುವರೆಗೂ ತಿಳಿಸಿಲ್ಲ. ಮಳೆ, ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾದವರಿಗೆ ಪರಿಹಾರ ಸಿಕ್ಕಿಲ್ಲ. ಶಾಸಕರು ಅನುದಾನ ತಂದು ಹೊಸ ಕೆಲಸ ಮಾಡುತ್ತಾರೆ ಅಂತ ಅಂದುಕೊಳ್ಳುತ್ತಾರೆ.ಸಮಯ ಸಿಕ್ಕಾಗ ಕೇವಲ ಮಾತನಾಡಿ ಕಾಡಿಬೇಡಿ ಹೋಗುವುದೇ ಆಗಿದೆ. ಹೀಗಾಗಿ ರಾಜ್ಯ ಸರ್ಕಾರ ನೀಡುವ ಭತ್ಯೆ ಪಡೆಯದಿರಲು ನಿರ್ಧರಿಸಿದ್ದೇನೆ ಎಂದು ಸ್ಪೀಕರ್ ಗೆ ಬರೆದ ಪತ್ರದಲ್ಲಿ ಶಾಸಕ ಶರಣಗೌಡ ಕಂದಕೂರ ಉಲ್ಲೇಖಿಸಿದ್ದಾರೆ.








