ತುಮಕೂರು : ತುಮಕೂರಿನಲ್ಲಿ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ಮುಂದುವರೆದಿದ್ದು, ಯಾತ್ರೆಯಲ್ಲಿ ಜೆಡಿಎಸ್ ಪಕ್ಷದ ಇಬ್ಬರು ಶಾಸಕರು ಪ್ರತ್ಯಕ್ಷರಾಗಿದ್ದಾರೆ.
ಬೆಳಗ್ಗೆ ತುರುವೇಕೆರೆ ತಾಲೂಕಿನ ಮಾಯಸಂದ್ರದಲ್ಲಿ ನಡೆದ ಪಾದಯಾತ್ರೆಯಲ್ಲಿ ಗುಬ್ಬಿ ಶಾಸಕ ಶ್ರೀನಿವಾಸ್ ಭಾಗಿಯಾಗಿದ್ದರು, ಇತ್ತೀಚೆಗೆ ಜೆಡಿಎಸ್ ನಿಂದ ಹೊರಬಂದಿದ್ದ ಶ್ರೀನಿವಾಸ್ ರಾಹುಲ್ ಗಾಂಧಿ ಜೊತೆ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದರು.
ಅದೇ ರೀತಿ ಜೆಡಿಎಸ್ ನಿಂದ ದೂರವಾಗಿದ್ದ ವಿಧಾನ ಪರಿಷತ್ ಸದಸ್ಯ ಸಿ ಆರ್ ಮನೋಹರ್ ಕೂಡ ಪಾದಯಾತ್ರೆ ಕೊನೆಯಲ್ಲಿ ಭಾಗಿಯಾಗಿದ್ದರು. ಸಿ ಆರ್ ಮನೋಹರ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವೇದಿಕೆಗೆ ಕರೆ ತಂದಿದ್ದಾರೆ. ಮನೋಹರ್ ಅವರನ್ನು ಕರೆದು ಕೊಂಡು ಬಂದ ಡಿಕೆಶಿ ವೇದಿಕೆ ಮೇಲೆ ನಿಲ್ಲಿಸಿದ್ದಾರೆ. ಈ ಮೂಲಕ ಶ್ರೀನಿವಾಸ್ ಹಾಗೂ ಮನೋಹರ್ ಇಬ್ಬರು ಕಾಂಗ್ರೆಸ್ ಸೇರಲಿರುವುದು ಖಚಿತ ಎನ್ನುವ ಗುಸು ಗುಸು ಕೇಳಿಬಂದಿದೆ.
‘ಕೊಲ್ಲೂರು ಮೂಕಾಂಬಿಕಾ ದೇವಾಲಯ’ದಲ್ಲಿ ಯಾವುದೇ ರೀತಿಯ ‘ಸಲಾಂ ಮಂಗಳಾರತಿ’ ಇಲ್ಲ – ಶಾಸಕ ಸುಕುಮಾರ ಶೆಟ್ಟಿ ಸ್ಪಷ್ಟನೆ