ಬೆಂಗಳೂರು: ಹಳೆ ಮೈಸೂರು ಭಾಗದಲ್ಲಿ ನಮ್ಮ ಪಕ್ಷದ ಸಂಘಟನಾ ಕಾರ್ಯಗಳನ್ನು ನೋಡಿ ಹೆದರಿದ್ದಾರೆ ಹೆಚ್ ಡಿ ಕುಮಾರಸ್ವಾಮಿ. ಮೊನ್ನೆ ಮಂಡ್ಯಲ್ಲಿ ನಡೆದ ನಮ್ಮ ಜನಸಂಕಲ್ಪ ಯಾತ್ರೆಯ ಯಶಸ್ಸಿನಿಂದ ಕಂಗೆಟ್ಟಿರುವ ಜೆಡಿಎಸ್, ಕಳೆದುಹೋಗುತ್ತಿರುವ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ನಂದಿನಿಯ ವಿಷಯದಲ್ಲಿ ಸುಳ್ಳು ಹರಡತೊಡಗಿದೆ ಎಂಬುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಾಗ್ಧಾಳಿ ನಡೆಸಿದ್ದಾರೆ.
ಹಳೆ ಮೈಸೂರು ಭಾಗದಲ್ಲಿ ನಮ್ಮ ಪಕ್ಷದ ಸಂಘಟನಾ ಕಾರ್ಯಗಳನ್ನು ನೋಡಿ ಹೆದರಿದ್ದಾರೆ @hd_kumaraswamy. ಮೊನ್ನೆ ಮಂಡ್ಯಲ್ಲಿ ನಡೆದ ನಮ್ಮ ಜನಸಂಕಲ್ಪ ಯಾತ್ರೆಯ ಯಶಸ್ಸಿನಿಂದ ಕಂಗೆಟ್ಟಿರುವ @JanataDal_S, ಕಳೆದುಹೋಗುತ್ತಿರುವ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ನಂದಿನಿಯ ವಿಷಯದಲ್ಲಿ ಸುಳ್ಳು ಹರಡತೊಡಗಿದೆ.
1/4— Nalinkumar Kateel (@nalinkateel) January 4, 2023
ಈ ಕುರಿತಂತೆ ಸರಣಿ ಟ್ವಿಟ್ ಮಾಡಿರುವಂತ ಅವರು, ನಾಡಿನ ಹೆಮ್ಮೆಯ ಪ್ರತೀಕ ನಂದಿನಿ. ನಂದಿನಿ-ಅಮುಲ್ ಎರಡೂ ಸಂಸ್ಥೆಗಳು ದೇಶದ ರೈತರ ಯೋಗಕ್ಷೇಮಕ್ಕಾಗಿ ದುಡಿಯುತ್ತಿವೆ. ಕೇಂದ್ರ ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು, ನಾಡಿನ ರೈತರ ಜೀವನಾಡಿಯನ್ನು ಹಾಲು ಉತ್ಪಾದನಾ ಕ್ಷೇತ್ರದಲ್ಲಿನ ದೇಶದ ಇತರೆ ಸಂಸ್ಥೆಗಳ ಸಹಕಾರದೊಂದಿಗೆ ಬೆಳೆಸುವುದರ ಬಗ್ಗೆ ಮಾತನಾಡಿದ್ದಾರೆ ಎಂದಿದ್ದಾರೆ.
ನಾಡಿನ ಹೆಮ್ಮೆಯ ಪ್ರತೀಕ ನಂದಿನಿ. ನಂದಿನಿ-ಅಮುಲ್ ಎರಡೂ ಸಂಸ್ಥೆಗಳು ದೇಶದ ರೈತರ ಯೋಗಕ್ಷೇಮಕ್ಕಾಗಿ ದುಡಿಯುತ್ತಿವೆ. ಕೇಂದ್ರ ಸಹಕಾರ ಸಚಿವರಾದ ಶ್ರೀ @AmitShah ಅವರು, ನಾಡಿನ ರೈತರ ಜೀವನಾಡಿಯನ್ನು ಹಾಲು ಉತ್ಪಾದನಾ ಕ್ಷೇತ್ರದಲ್ಲಿನ ದೇಶದ ಇತರೆ ಸಂಸ್ಥೆಗಳ ಸಹಕಾರದೊಂದಿಗೆ ಬೆಳೆಸುವುದರ ಬಗ್ಗೆ ಮಾತನಾಡಿದ್ದಾರೆ.
2/4— Nalinkumar Kateel (@nalinkateel) January 4, 2023
ರಾಜಕೀಯವಾಗಿ ಅತಂತ್ರ ಪರಿಸ್ಥಿತಿಯಲ್ಲಿರುವ ಜೆಡಿಎಸ್ ಪಕ್ಷ, ಸ್ವಹಿತ ಸಾಧನೆಗೆ ಜನರ ದಿಕ್ಕು ತಪ್ಪಿಸುವ ಹೆಚ್ ಡಿ ಕುಮಾರಸ್ವಾಮಿ, ದೇಶದ ಸರ್ವತೋಮುಖ ಬೆಳವಣಿಗೆಯ ಪರವಾಗಿರುವ ಬಿಜೆಪಿಯ ವಿರುದ್ಧ ಜನರನ್ನು ಎತ್ತಿಕಟ್ಟುವ ಮೂಲಕ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ರಾಜಕೀಯವಾಗಿ ಅತಂತ್ರ ಪರಿಸ್ಥಿತಿಯಲ್ಲಿರುವ @JanataDal_S, ಸ್ವಹಿತ ಸಾಧನೆಗೆ ಜನರ ದಿಕ್ಕು ತಪ್ಪಿಸುವ @hd_kumaraswamy, ದೇಶದ ಸರ್ವತೋಮುಖ ಬೆಳವಣಿಗೆಯ ಪರವಾಗಿರುವ ಬಿಜೆಪಿಯ ವಿರುದ್ಧ ಜನರನ್ನು ಎತ್ತಿಕಟ್ಟುವ ಮೂಲಕ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ.
3/4— Nalinkumar Kateel (@nalinkateel) January 4, 2023
ನಂದಿನಿಯ ವಿಲೀನದ ಪ್ರಸ್ತಾಪವೇ ಇಲ್ಲ. ಈಗಾಗಲೇ ಮುಖ್ಯಮಂತ್ರಿಗಳೂ ಇದನ್ನು ಸ್ಪಷ್ಟಪಡಿಸಿದ್ದಾರೆ. ಕರ್ನಾಟಕದ ಹೆಗ್ಗುರುತಾಗಿರುವ ನಂದಿನಿಯನ್ನು ದೇಶದ ಇತರೆ ಸಂಸ್ಥೆಗಳ ಸಹಯೋಗದೊಂದಿಗೆ ಅಭಿವೃದ್ದಿಪಡಿಸಿ ಮತ್ತೊಂದು ಎತ್ತರಕ್ಕ ಕೊಂಡೊಯ್ಯುತ್ತೇವೆ. ಕೆಎಂಎಫ್ ಅನ್ನು ತಮ್ಮ ಕುಟುಂಬದ ಆಸ್ತಿಯೆಂಬಂತೆ ಮಾಡಿಕೊಂಡಿದ್ದವರಿಗೆ ಈ ಭಯ ಸಹಜ ಎಂದು ಹೇಳಿದ್ದಾರೆ.
ನಂದಿನಿಯ ವಿಲೀನದ ಪ್ರಸ್ತಾಪವೇ ಇಲ್ಲ. ಈಗಾಗಲೇ ಮುಖ್ಯಮಂತ್ರಿಗಳೂ ಇದನ್ನು ಸ್ಪಷ್ಟಪಡಿಸಿದ್ದಾರೆ. ಕರ್ನಾಟಕದ ಹೆಗ್ಗುರುತಾಗಿರುವ ನಂದಿನಿಯನ್ನು ದೇಶದ ಇತರೆ ಸಂಸ್ಥೆಗಳ ಸಹಯೋಗದೊಂದಿಗೆ ಅಭಿವೃದ್ದಿಪಡಿಸಿ ಮತ್ತೊಂದು ಎತ್ತರಕ್ಕ ಕೊಂಡೊಯ್ಯುತ್ತೇವೆ. ಕೆಎಂಎಫ್ ಅನ್ನು ತಮ್ಮ ಕುಟುಂಬದ ಆಸ್ತಿಯೆಂಬಂತೆ ಮಾಡಿಕೊಂಡಿದ್ದವರಿಗೆ ಈ ಭಯ ಸಹಜ!
4/4— Nalinkumar Kateel (@nalinkateel) January 4, 2023