ರಾಯಚೂರು: ಜಿಲ್ಲೆಯ ದೇವದುರ್ಗದ ಜೆಡಿಎಸ್ ನಿಯೋಜಿತ ಅಭ್ಯರ್ಥಿ ಕರೆಮ್ಮ ನಾಯಕ್ ಬಿಜೆಪಿ ಶಾಸಕ ಶಿವನಗೌಡ ನಾಯಕ್ರಿಂದ ಜೀವ ಬೆದರಿಕೆ ಇದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.
BIG NEWS: ‘ಆಶ್ರಯ ಮನೆ ಮಾಲೀಕ’ರಿಗೆ ಬಿಗ್ ಶಾಕ್: ವಾಸವಿಲ್ಲದೇ ಇದ್ದರೇ ‘ಆಶ್ರಯ ಮನೆ ರದ್ದು’
ಜೆಡಿಎಸ್ ನಿಂದ ಆಯೋಜಿಸಿದ್ದ ಬಂಜಾರ ಸಮಾವೇಶ ಯಶಸ್ವಿಯಾದ ಹಿನ್ನೆಲೆ ಶಿವನಗೌಡ ನಾಯಕ್ ಹಿಂಬಾಲಕರು ಹಲ್ಲೆಗೆ ಯತ್ನಿಸಿದ್ದಾರೆ ಅಂತ ಆರೋಪಿಸಿದ್ದಾರೆ. ಕರೆಮ್ಮ ನಾಯಕ್ ಹಾಗೂ ಅವರ ಮಗಳು ಗೌತಮಿ ಮೇಲೆ ಹಲ್ಲೆ ನಡೆಸಲು ಯತ್ನಿಸಲಾಗಿದ್ದು, ಘಟನೆಯಲ್ಲಿ ಕಾರ್ಯಕರ್ತ ಶಿವಪ್ಪಗೆ ಗಾಯಗಳಾಗಿವೆ. ಈ ಹಿನ್ನೆಲೆ ಈಗಾಗಲೇ ದೇವದುರ್ಗ ಪೊಲೀಸ್ ಠಾಣೆಯಲ್ಲಿ 10 ಜನರ ಮೇಲೆ ದೂರು ದಾಖಲಾಗಿದೆ. ಪ್ರಕರಣ ದಾಖಲಾಗಿದ್ದರು ಕ್ರಮ ಕೈಗೊಳ್ಳದ ಹಿನ್ನೆಲೆ ಪೊಲೀಸರ ವಿರುದ್ಧ ಎಸ್ಪಿಗೆ ದೂರು ನೀಡಿದ್ದಾರೆ.