ಮೈಸೂರು : ರಾಜ್ಯದಲ್ಲಿ ಜೆಡಿಎಸ್ ಎಲ್ಲಿದೆ? ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ ಆದರೆ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಕಲಬೆರಿಕೆ ಎಂದು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪ್ರಜಾದೋನಿ ಸಮಾವೇಶದಲ್ಲಿ ಪಶು ಸಂಗೋಪನ ಸಚಿವ ಕೆ ವೆಂಕಟೇಶ್ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಏ. 14ರಂದು ದೇಶಾದ್ಯಂತ ‘ಸಂವಿಧಾನ ಉಳಿಸಿ, ಸರ್ವಾಧಿಕಾರ ನಿರ್ಮೂಲನೆ’ ದಿನ ಆಚರಿಸಲಿರುವ ‘ಎಎಪಿ’
ಸಿಎಂ ಸಿದ್ದರಾಮಯ್ಯ ಸುಕ್ಷೇತ್ರ ಮೈಸೂರಿನಲ್ಲಿ ಗೆಲ್ಲಲೇಬೇಕಿದೆ. ಮೈಸೂರಲ್ಲಿ ಸೋತರೆ ಸಿಎಂಗೆ ಅಪಮಾನವಾಗುತ್ತದೆ ಕೆಟ್ಟ ಮೆಸೇಜು ಹೋಗುತ್ತದೆ. ಸಿಎಂ ಮೈಸೂರಿನವರೇ ಆಗಿದ್ದಾರೆ ಹೀಗಾಗಿ ಮೈಸೂರು ಕ್ಷೇತ್ರವನ್ನು ಗೆಲ್ಲಿಸಿ ಎಂದು ಪ್ರಜಾಧ್ವನಿ ಸಮಾವೇಶದಲ್ಲಿ ಸಚಿವ ವೆಂಕಟೇಶ್ ಭಾಷಣದ ವೇಳೆ ಮಾತನಾಡಿದರು.
ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಕಾಂಗ್ರೆಸ್ ಪ್ರಜಾಧನಿ ಸಮಾವೇಶ ನಡೆಯುತ್ತಿದೆ. ಈ ಸಮಾವೇಶದಲ್ಲಿ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿ ಜೆಡಿಎಸ್ ಎಲ್ಲಿದೆ? ಮೂರು ಜಿಲ್ಲೆಯಲ್ಲಿ ಮಾತ್ರ ಇದೆ. ಜೆಡಿಎಸ್ ನವರು ಅವಕಾಶವಾದಿಗಳು ಅಸ್ತಿತ್ವಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಜೆಡಿಎಸ್ ಬಿಜೆಪಿ ಮೈತ್ರಿ ಕಲಬೆರಕೆ ಎಂದು ಸಚಿವ ವೆಂಕಟೇಶ್ ವಾಗ್ದಾಳಿ ನಡೆಸಿದರು.
ಗದಗದಲ್ಲಿ ಬೆಚ್ಚಿ ಬೀಳಿಸಿದ ಜೋಡಿ ಆತ್ಮಹತ್ಯೆ : ಮದುವೆಯಾಗಿ ಒಂದೇ ವಾರದಲ್ಲಿ ಯುವತಿ, ಪ್ರಿಯಕರನ ಜೊತೆಗೆ ನೇಣಿಗೆ ಶರಣು
ನಮ್ಮ ಅಭ್ಯರ್ಥಿ ಮಹಾರಾಜನಲ್ಲ ಅರಮನೆಯಲ್ಲಿ ಇರಲ್ಲ.ಸಾಮಾನ್ಯ ವ್ಯಕ್ತಿ.ಈಗಾಗಲೇ ಅಭ್ಯರ್ಥಿ ಯದುವೀರ್ ಗೆದ್ದಾಗಿದೆ ಎಂದು ಅಂದುಕೊಂಡಿದ್ದಾರೆ ನಾನು ಹೇಳುತ್ತೇನೆ ನಮ್ಮ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆ. ಎಂದು ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ ಭಾಷಣದಲ್ಲಿ ತಿಳಿಸಿದರು.