ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ 2023ರಕ್ಕೆ (Karnataka assembly Election 2023 ) ಜೆಡಿಎಸ್ ಭರ್ಜರಿ ತಯಾರಿ ನಡೆಸಿದೆ. ಈಗಾಗಲೇ ಪಂಚರತ್ನ ರಥಯಾತ್ರೆ ನಡೆಸುತ್ತಿರುವಂತ ಜೆಡಿಎಸ್, ನಿನ್ನೆ ತನ್ನ 93 ಹುರಿಯಾಳುಗಳ ಪಟ್ಟಿಯನ್ನು ಪ್ರಕಟಿಸಿತ್ತು.
ಇದೀಗ ಶಾಸಕ ನಾಗನಗೌಡ ಕಂದಕೂರು ಅವರಿಗೆ ಟಿಕೆಟ್ ನೀಡುವುದಾಗಿ ಘೋಷಿಸಿದ್ದ ಜೆಡಿಎಸ್ ಇಂದು ನಾಗನಗೌಡ ಕಂದಕೂರು ಬದಲಿಗೆ ಅವರ ಪುತ್ರ ಶರಣಗೌಡ ಕಂದಕೂರ ಅವರಿಗೆ ಜೆಡಿಎಸ್ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ.
ನಿನ್ನೆ ಶಾಸಕ ನಾಗನಗೌಡ ಕಂದಕೂರು ಅವರು ಪುತ್ರನಿಗೆ ಟಿಕೆಟ್ ನೀಡಬೇಕೆಂದು ಜೆಡಿಎಸ್ ನಾಯಕರಿಗೆ ಕೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಶರಣಗೌಡ ಕಂದಕೂರು ಅವರನ್ನು 2023ರ ಚುನಾವಣೆಯ ಗುರುಮಠಕಲ್ ಜೆಡಿಎಸ್ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ.
SHOCKING : ಛೇ..ಇದೆಂತಹ ಘೋರ ಕೃತ್ಯ : ಮುದ್ದಾದ ಮಗಳನ್ನೇ ಕೊಂದ ಮಹಾತಾಯಿ..!