ಚಿಕ್ಕಬಳ್ಳಾಪುರ: ಸಚಿವ ಉಮೇಶ್ ಕತ್ತಿ ನಿಧನದಿಂದ ನಾಳೆ ನಡೆಯುವ ಬಿಜೆಪಿ ಜನೋತ್ಸವ ರದ್ದು ಆಗುವ ಸಾಧ್ಯತೆ ಇದೆ ಎಂದು ಅಂದು ಕೊಂಡಿದ್ದರು. ಆದರೆ ಇದಕ್ಕೆ ಇಂದು ಸುಧಾಕರ್ ಅವರು ಸ್ಪಷ್ಟನೆ ನೀಡಿದ್ದಾರೆ. ನಾಳೆ ನಿಗದಿಯಂತೆ ಜನೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಸಚಿವ ಸುಧಾಕರ್ ಹೇಳಿದ್ದಾರೆ.
BIGG NEWS: ಸಚಿವ ಉಮೇಶ್ ಕತ್ತಿ ನಿಧನಕ್ಕೆ ಡಿ.ಕೆ ಶಿವಕುಮಾರ್ ಕಣ್ಣೀರು
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದಲ್ಲಿ ನಾಳೆ ಜನೋತ್ಸವ ಕಾರ್ಯಕ್ರಮ ನಡೆಯಲಿದೆ. ಈ ಸಂಬಂಧ ಆಡಿಯೋ ಸಂದೇಶ ಕಳುಹಿಸಿರುವ ಸಚಿವರು, ಪ್ರೋಗ್ರಾಂ ಈಸ್ ಆನ್. ಎಲ್ಲಾ ಮುಖಂಡರು ಕಾರ್ಯಕ್ರಮಕ್ಕೆ ಕಡ್ಡಾಯವಾಗಿ ಬರಬೇಕು. ಈಗಿನಿಂದಲೇ ಎಲ್ಲಾ ಮುಖಂಡರಿಗೂ ಹೇಳಿಬಿಡಿ. ಕಾರ್ಯಕ್ರಮ ಮುಂದುವರಿಯುತ್ತೆ. 8 ಗಂಟೆಗೆ ಸರಿಯಾಗಿ ಕಾರ್ಯಕ್ರಮ ನಡೆಯುತ್ತೆ. ಎಲ್ಲರಿಗೂ ನೀಡಿದ ಜವಾಬ್ದಾರಿಯನ್ನು ಚಾಚು ತಪ್ಪದಂತೆ ಮಾಡಿ ಎಂದು ಹೇಳಿದ್ದಾರೆ.ಇನ್ನು ಉಮೇಶ ಕತ್ತಿ ನಿಧನಕ್ಕೆ 1 ದಿನ ಶೋಕಾಚರಣೆ ನಡೆಸುವುದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಈಗ ಶೋಕಾಚರಣೆ ನಡುವೆ ಸರ್ಕಾರ ಜನೋತ್ಸವಕ್ಕೆ ಸಂಪೂರ್ಣ ಸಿದ್ಧತೆ ನಡೆಸಲಾಗುತ್ತಿದೆ.