ಬೆಂಗಳೂರು: ಸರ್ಕಾರದ ಮೂರು ವರ್ಷ ಪೂರೈಸಿದ ಆಡಳಿತ ಬಗ್ಗೆ ಜನರಿಗೆ ತಿಳಿಸುವ ಸಲುವಾಗಿ ಬಿಜೆಪಿ ಜನೋತ್ಸವ ಕಾರ್ಯಕ್ರಮ ಬೆಂಗಳೂರು ಗ್ರಾಮಾಂತರ ದೊಡಬಳ್ಳಾಪರದಲ್ಲಿ ಏರ್ಪಡಿಸಿದೆ. ಇದೇ ತಿಂಗಳು 28ರಂದು ಕಾರ್ಯಕ್ರಮ ನಡೆಯಲಿದೆ.
BREAKING NEWS: ಕೇರಳದ ವೈದ್ಯಕೀಯ ಕಾಲೇಜಿನಲ್ಲಿ ಕಪ್ಪುಹಣ ಹಗರಣ: ಸಿಎಸ್ಐ ಕಚೇರಿಗಳ ಮೇಲೆ ED ದಾಳಿ
ಈಗಾಗಲೇ ಕಾರ್ಯಕ್ರಮಕ್ಕೆ ಸಿದ್ಧತೆ ಭರದಿಂದ ಸಾಗುತ್ತಿದೆ. ಸದ್ಯ ಕಾರ್ಯಕ್ರಮ ಕುರಿತು ಬಿಜೆಪಿ ನಾಯಕರು ಸಭೆ ನಡೆಸಿ, ಚರ್ಚೆಗಳನ್ನ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಬರುತ್ತಾರೆ ಎಂದು ಹೇಳಲಾಗಿತ್ತು. ಇದೀಗ ಈ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ಈ ಬಗ್ಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಈ ಕಾರ್ಯಕ್ರಮಕ್ಕೆ ಪಿಎಂ ನರೇಂದ್ರ ಮೋದಿ ಬರುವುದಿಲ್ಲ, ಜೆ.ಪಿ. ನಡ್ಡಾ ಅವರು ಬರುತ್ತಿದ್ದಾರೆ ಎಂದು ಹೇಳಿದ್ದಾರೆ.