ಮಂಗಳೂರು : ಸುರತ್ಕಲ್ ನ ಕಾಟಿಪಳ್ಯದಲ್ಲಿ ಜಲೀಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಂಧನವಾಗಿರುವ ಹಿನ್ನೆಲೆ ‘ಮದ್ಯ’ ಮಾರಾಟ ನಿಷೇಧ ಆದೇಶವನ್ನು ಜಿಲ್ಲಾಧಿಕಾರಿಗಳು ವಾಪಸ್ ಪಡೆದಿದ್ದಾರೆ.
ಸುರತ್ಕಲ್ ನ ಕಾಟಿಪಾಳ್ಯದಲ್ಲಿ ಜಲೀಲ್ ಕೊಲೆ ನಡೆದ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಸುರತ್ಕಲ್, ಬಜಪೆ, ಕಾವೂರು ಮತ್ತು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಿ.29 ರ ಬೆಳಗ್ಗೆ 10 ಗಂಟೆವರೆಗೆ ಮದ್ಯ ಮಾರಾಟ ನಿಷೇಧಗೊಳಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಂ ಆರ್ ರವಿಕುಮಾರ್ ಆದೇಶ ಹೊರಡಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಂಧನವಾಗಿರುವ ಹಿನ್ನೆಲೆ, ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿರುವ ಹಿನ್ನೆಲೆ ಮದ್ಯ ಮಾರಾಟ ನಿಷೇಧ ಆದೇಶವನ್ನು ಹಿಂಪಡೆದು ಆದೇಶಿಸಿದ್ದಾರೆ. ಸುರತ್ಕಲ್ನಲ್ಲಿ ದುಷ್ಕರ್ಮಿಗಳಿಬ್ಬರು ಜಲೀಲ್ ಹತ್ಯೆಗೈದು ಪರಾರಿಯಾಗಿದ್ದರು. ಮುಂಜಾಗ್ರತ ಕ್ರಮವಾಗಿ ಮದ್ಯ ಮಾರಾಟ ನಿಷೇಧಗೊಳಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಂ ಆರ್ ರವಿಕುಮಾರ್ ಆದೇಶ ಹೊರಡಿಸಿದ್ದರು.
BREAKING NEWS : ಬೆಂಗಳೂರಿನಲ್ಲಿ ಶಿವಮೊಗ್ಗ ಮೂಲದ ಬಾಲಕಿ ಆತ್ಮಹತ್ಯೆ ,ಕಾರಣ ನಿಗೂಢ..!
BIGG NEWS : ‘ಕರ್ನಾಟಕದ ಒಂದಿಂಚೂ ಭೂಮಿ ಬಿಟ್ಟು ಕೊಡೋದಿಲ್ಲ’ ; ಮಹಾ ನಿರ್ಣಯಕ್ಕೆ ಸಿಎಂ ಬೊಮ್ಮಾಯಿ ಖಡಕ್ ಪ್ರತಿಕ್ರಿಯೆ