ನವದೆಹಲಿ : ಜೈಶ್-ಎ-ಮೊಹಮ್ಮದ್ (JeM) ಸಂಸ್ಥಾಪಕ ಮೌಲಾನಾ ಮಸೂದ್ ಅಜರ್’ಗೆ ಹೃದಯಾಘಾತವಾಗಿದೆ ಎಂದು ವರದಿಯಾಗಿದೆ.
ವರದಿಯ ಪ್ರಕಾರ, ಭಾರತದಲ್ಲಿ ನಡೆದ ಮಾರಣಾಂತಿಕ ಪುಲ್ವಾಮಾ ದಾಳಿಯ ಹಿಂದಿರುವ ಅಜರ್, ಆರೋಗ್ಯ ಹದಗೆಟ್ಟಾಗ ಅಫ್ಘಾನಿಸ್ತಾನದಲ್ಲಿದ್ದ. ನಂತ್ರ ಅವನನ್ನ ಚಿಕಿತ್ಸೆಗಾಗಿ ಪಾಕಿಸ್ತಾನದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
1999ರಲ್ಲಿ ಐಸಿ-814 ವಿಮಾನ ಅಪಹರಣವಾದ ಬಳಿಕ ಮಸೂದ್ ಅಜರ್’ನನ್ನು ಬಿಡುಗಡೆ ಮಾಡಬೇಕಾಯಿತು.
2001ರಲ್ಲಿ ಭಾರತೀಯ ಸಂಸತ್ತಿನ ಮೇಲೆ ನಡೆದ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಅಜರ್. 2016ರಲ್ಲಿ ಪಠಾಣ್ಕೋಟ್ ದಾಳಿ, 2019 ರಲ್ಲಿ ಪುಲವಾಮಾ ದಾಳಿ ಮತ್ತು ಭಾರತದಲ್ಲಿ ನಡೆದ ಹಲವಾರು ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ.
ಸೆಪ್ಟೆಂಬರ್ 2019ರಲ್ಲಿ, ಭಾರತವು ಅಜರ್ ಮತ್ತು ಪಾಕಿಸ್ತಾನ ಮೂಲದ ಇನ್ನೊಬ್ಬ ಭಯೋತ್ಪಾದಕ, ಲಷ್ಕರ್-ಎ-ತೈಬಾ ಸಂಸ್ಥಾಪಕ ಹಫೀಜ್ ಮುಹಮ್ಮದ್ ಸಯೀದ್’ನನ್ನ ಕಠಿಣ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ‘ವೈಯಕ್ತಿಕ ಭಯೋತ್ಪಾದಕರು’ ಎಂದು ಹೆಸರಿಸಿತು.
BREAKING: ಶಿವಮೊಗ್ಗದಲ್ಲಿ ಜೀಪ್-ಟಿಟಿ ನಡುವೆ ಭೀಕರ ಅಪಘಾತ: 8 ಮಂದಿಗೆ ಗಾಯ, ಮೂವರ ಸ್ಥಿತಿ ಗಂಭೀರ
ಬೆಂಗಳೂರು ಜನತೆ ಗಮನಕ್ಕೆ: ನಾಳೆ ಬೆಳಿಗ್ಗೆ 10 ರಿಂದ 3ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut
ಈ ಮಂತ್ರ ಹೇಳಿದರೆ 3 ದಿನದಲ್ಲಿ ನಿಮ್ಮ ಇಷ್ಟಾರ್ಥ ನೆರವೇರುತ್ತದೆ: ಇದು ಲಕ್ಷಾಂತರ ಜನರ ನಂಬಿಕೆ