ಶ್ರೀನಗರ: ಜೈಲಿನಲ್ಲಿದ್ದ ಪಾಕಿಸ್ತಾನಿ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕನನ್ನು ಜಮ್ಮುವಿನ ಅಂತಾರಾಷ್ಟ್ರೀಯ ಗಡಿಯ ಬಳಿ ಬುಧವಾರ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಪೊಲೀಸರಿಂದ ರೈಫಲ್ ಕಸಿದುಕೊಂಡು ಪರಾರಿಯಾಗಲು ಯತ್ನಿಸಿದ ಮೊಹಮ್ಮದ್ ಅಲಿ ಹುಸೇನ್ ಮೇಲೆ ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡಿನ ದಾಳಿಯಲ್ಲಿ ಓರ್ವ ಪೊಲೀಸ್ ಪೇದೆಯೂ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಭಯೋತ್ಪಾದಕನನ್ನು ಹಲವು ವರ್ಷಗಳಿಂದ ಜಮ್ಮುವಿನ ಕೋಟ್ ಬಲ್ವಾಲ್ ಜೈಲಿನಲ್ಲಿ ಇರಿಸಲಾಗಿತ್ತು. ಈತ ಎಲ್ಇಟಿ ಮತ್ತು ಅಲ್-ಬದ್ರ್ ಭಯೋತ್ಪಾದಕ ಗುಂಪುಗಳ ಪ್ರಮುಖ ಕಾರ್ಯಕರ್ತನಾಗಿದ್ದಾನೆ ಎಂದು ಜಮ್ಮುವಿನ ಒಬ್ಬ ಆರೋಪಿ ಬಹಿರಂಗಪಡಿಸಿದ್ದಾನೆ ಎನ್ನಲಾಗಿದ್ದು, ನ್ಯಾಯಾಂಗ ಬಂಧಿನದಲ್ಲಿದ್ದನು.
ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲು ಪೊಲೀಸರು ಅವರನ್ನು ನಿನ್ನೆ ಗಡಿಗೆ ಕರೆದೊಯ್ದಿದ್ದ ವೇಳೆ ಅಲ್ಲಿ ಉಗ್ರನು ತಪ್ಪಿಸಿಕೊಳ್ಳಲು ಪೊಲೀಸರಿಂದ ರೈಫಲ್ ಕಸಿದುಕೊಂಡು ಓಡಲು ಪ್ರಯತ್ನಿಸಿದನು. ಈ ವೇಳೆ ಪೊಲೀಸರು ಆತನ ಮೇಲೆ ಗುಂಡು ಹಾರಿಸಿದ ಪರಿಣಾಮ ಆತ ಅಲ್ಲೇ ಸಾವನ್ನಪ್ಪಿದ್ದಾನೆ. ಇನ್ನೂ, ಘಟನೆ ವೇಳೆ ಓರ್ವ ಪೊಲೀಸ್ ಪೇದೆಯೂ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.