ದಾಮೋಹ್ (ಮಧ್ಯಪ್ರದೇಶ): ಜೈಲಿನಲ್ಲಿರುವ ಕೊಲೆ ಪ್ರಕರಣದ ಆರೋಪಿಯೊಬ್ಬರು ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಜನಪದ ಪಂಚಾಯತ್ ಅಧ್ಯಕ್ಷರಾಗಿ ಬುಧವಾರ ಆಯ್ಕೆಯಾಗಿದ್ದಾರೆ.
ಕಳೆದ ಮೂರು ವರ್ಷಗಳಿಂದ ಜೈಲಿನಲ್ಲಿರುವ ಇಂದ್ರಪಾಲ್ ಪಟೇಲ್ ಅವರು ಈ ಹಿಂದೆ ಜನಪದ ಪಂಚಾಯತ್ ಸದಸ್ಯರಾಗಿ ಚುನಾವಣೆಯಲ್ಲಿ ಗೆದ್ದಿದ್ದರು. ಇದೀಗ ಜನಪದ ಪಂಚಾಯತ್ ಅಧ್ಯಕ್ಷರಾಗಿ ಬುಧವಾರ ಆಯ್ಕೆಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್ಡಿಎಂ) ಮತ್ತು ಚುನಾವಣಾ ಅಧಿಕಾರಿ ಅಭಿಷೇಕ್ ಠಾಕೂರ್ ಮಾತನಾಡಿ, 17 ಸದಸ್ಯ ಬಲದ ಹಟ್ಟಾ ಜನಪದ ಪಂಚಾಯತ್ನಲ್ಲಿ 16 ಮತಗಳಲ್ಲಿ 11 ಮತಗಳನ್ನು ಪಡೆದು ಪಟೇಲ್ ಅವರು ಜನಪದ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಲಾಗಿದೆ. ಪಟೇಲ್ ಜೈಲಿನಲ್ಲಿರುವ ಕಾರಣ ಮತದಾನ ಮಾಡಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.
ಇಲ್ಲಿ ಆಶ್ಚರ್ಯಕರ ವಿಚಾರವೆಂದ್ರೆ, ಪಕ್ಷಕ್ಕೆ ಚಿಹ್ನೆ ಇಲ್ಲದೆ ಚುನಾವಣೆ ನಡೆದಿದೆ ಎನ್ನಲಾಗಿದೆ. ಇಂದ್ರಪಾಲ್ ಪಟೇಲ್ ಅವರ ತಂದೆ ಮತ್ತು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಶಿವಚರಣ್ ಪಟೇಲ್ ಅವರು ತಮ್ಮ ಮಗ ಕೊಲೆ ಪ್ರಕರಣದಲ್ಲಿ ಮೂರು ವರ್ಷಗಳಿಗೂ ಹೆಚ್ಚು ಕಾಲದಿಂದಲೂ ಜೈಲಿನಲ್ಲಿದ್ದಾರೆ.
ವಾಯುಮಾಲಿನ್ಯವು ಬುದ್ಧಿಮಾಂದ್ಯತೆಯ ಅಪಾಯವನ್ನು ಹೆಚ್ಚಿಸುತ್ತದೆ: UK ಸಂಶೋಧಕರ ಬಹಿರಂಗ
BREAKING NEWS: ಎಣ್ಣೆ ವಿಚಾರಕ್ಕೆ ಬಿತ್ತು ಬಾಟಲಿ ಏಟು: ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನ ಬರ್ಬರ ಹತ್ಯೆ