ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಆರೋಪಿಗಳ ಜಾಮೀನು ಭವಿಷ್ಯ ಇಂದು ಪ್ರಕಟ ಆಗಲಿದ್ದು, ಈ ನಿಟ್ಟಿನಲ್ಲಿ ಎಲ್ಲರ ಗಮನ ಹೈಕೋರ್ಟ್ ನತ್ತ ನೆಟ್ಟಿದೆ. 7 ಜನ ಆರೋಪಿಗಳ ಪರ ವಿರುದ್ಧ ವಾದ – ಪ್ರತಿವಾದ ಆಲಿಸಿರೋ ನ್ಯಾ. ವಿಶ್ವಜಿತ್ ಶೆಟ್ಟಿ ಪೀಠದಿಂದ ಮಧ್ಯಾಹ್ನ 2:30ರ ವೇಳೆಗೆ ತೀರ್ಪು ಹೊರ ಬೀಳುವ ಸಾಧ್ಯತೆ ಇದೆ.
ಒಂದೊಮ್ಮೆ ದರ್ಶನ್ ಜಾಮೀನು ಅರ್ಜಿ ವಜಾಗೊಂಡರೆ, ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿ, ಗುಣಮುಖರಾದ ಬಳಿಕ ಮತ್ತೆ ಜೈಲಿಗೆ ಹೋಗಬೇಕಾದ ಸಂಧರ್ಭ ನಿರ್ಮಾಣವಾಗಲಿದೆ. ಇದಲ್ಲದೇ ಬೇಲ್ ಸಿಕ್ಕರೆ ಗುಣಮುಖರಾದ ನಂತರ ಮನೆಗೆ ತೆರಳಲಿದ್ದಾರೆ.