ಮೈಸೂರು: ಕಾಂಗ್ರೆಸ್ಗೆ ಸೇರಿದ ಕೆಲವೇ ತಿಂಗಳುಗಳಲ್ಲಿ ಪಕ್ಷಕ್ಕೆ ಗುಡ್ ಬೈ ಹೇಳಿ ಮತ್ತೆ ಬಿಜೆಪಿ ಸೇರಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನಂಜನಗೂಡು ಪಟ್ಟಣದ ಮೇದರ ಗೆರೆಯ ಗೋಡೆ ಬರಹ ಕಾರ್ಯಕ್ರಮದಲ್ಲಿ ಭಾಗಿಯಾಗಿ ದೇಶದಲ್ಲಿ ಮತ್ತೊಮ್ಮೆ ಮೋದಿ ಎಂಬ ಗೋಡೆಬರಹ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಿಜೆಪಿ ನಮ್ಮ ತವರು ಮನೆಗೆ ಮತ್ತೆ ಮರಳಿದ್ದೇನೆ. ಬಿಜೆಪಿಯ ರಾಜ್ಯ ಮುಖಂಡರು, ಕೇಂದ್ರ ಮುಖಂಡರು ಮತ್ತು ಸ್ಥಳೀಯ ಕಾರ್ಯಕರ್ತರಿಂದ ಉತ್ತಮವಾದ ಪ್ರತಿಕ್ರಿಯೆ ಸಿಗುತ್ತಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ನಮ್ಮ ಪರಿಶ್ರಮವು ಕೂಡ ಉತ್ತಮವಾಗಿತ್ತು. ನಮ್ಮ ಕೆಲ ವೈಯಕ್ತಿಕ ವಿಚಾರಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿದ್ದೆ ಎಂದು ತಿಳಿಸಿದರು.
ಅಲ್ಲಿಯೂ ಕೂಡ ನನಗೆ ಯಾವುದೇ ರೀತಿಯ ತೊಂದರೆ ಇರಲಿಲ್ಲ. ಆ ಪಕ್ಷದ ನಾಯಕರು ತಮ್ಮನ್ನು ಗೌರವಯುತವಾಗಿಯೇ ನಡೆಸಿಕೊಂಡಿದ್ದಾರೆ. ಆದರೆ, ಕೇಂದ್ರದ ಬಿಜೆಪಿ ಮುಖಂಡರು ನನ್ನನ್ನು ಪ್ರಬಲವಾಗಿ ಪಕ್ಷಕ್ಕೆ ಬರುವಂತೆ ಮನವೊಲಿಸಿದರು, ಹೀಗಾಗಿ ನನ್ನ ಮನೆಗೆ ನಾನು ಬಂದಿದ್ದೇನೆ ಎಂದು ಹೇಳಿದರು.
ರಾಜ್ಯದಲ್ಲಿ ಸಾಕಷ್ಟು ಖಾಸಗಿ ಸರ್ವೇಗಳನ್ನು ಮಾಡಿಸಲಾಗಿದೆ. 22 ಸ್ಥಾನಗಳನ್ನು ಗೆಲ್ಲುತ್ತೇವೆ ಎಂಬ ಭರವಸೆ ಇದೆ. ಕೇಂದ್ರದ ವರಿಷ್ಠರು ಸೂಚನೆ ನೀಡಿದರೆ ನಾನು ಪಾರ್ಲಿಮೆಂಟ್ ಎಲೆಕ್ಷನ್ಗೆ ಸ್ಪರ್ಧೆ ಮಾಡುತ್ತೇನೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.
BREAKING:ದೆಹಲಿಯ ‘ಜವಾಹರಲಾಲ್ ನೆಹರೂ’ ಸ್ಟೇಡಿಯಂನಲ್ಲಿ ಸ್ಟೇಜ್ ಬಿದ್ದು ಹಲವರು ಸಿಲುಕಿರುವ ಶಂಕೆ
ಇಂದಿನಿಂದ ಎರಡು ದಿನಗಳ ರಾಷ್ಟ್ರೀಯ ಸಮಾವೇಶ: ಲೋಕಸಭಾ ಚುನಾವಣೆಗೆ ‘ವಿಜಯ ಮಂತ್ರ’ ನೀಡಲಿರುವ ಪ್ರಧಾನಿ ಮೋದಿ