ನವದೆಹಲಿ: ʻಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್(Jacqueline Fernandez) ಅವರು ಸುಕೇಶ್ ಚಂದ್ರಶೇಖರ್ ಅವರ ಕ್ರಿಮಿನಲ್ ಪೂರ್ವಾಪರಗಳ ಇತಿಹಾಸದ ಬಗ್ಗೆ ತಿಳಿದಿದ್ದರು ಮತ್ತು ಬಹುಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯಿಂದ ಹೊರಬರಲು ಸುಳ್ಳು ಕಥೆಯನ್ನು ಕಟ್ಟಿದ್ದಾರೆʼ ಎಂದು ಜಾರಿ ನಿರ್ದೇಶನಾಲಯ ತನ್ನ ಆರೋಪಪಟ್ಟಿಯಲ್ಲಿ ತಿಳಿಸಿದೆ.
ಸುಕೇಶ್ ಚಂದ್ರಶೇಖರ್ ಅವರ ಪ್ರಕರಣಗಳ ಬಗ್ಗೆ ತನಗೆ ತಿಳಿದಿರಲಿಲ್ಲ ಎಂಬ ಜಾಕ್ವೆಲಿನ್ ಫರ್ನಾಂಡೀಸ್ ಅವರ ಹೇಳಿಕೆ ಸುಳ್ಳು ಎಂದು ಜಾರಿ ನಿರ್ದೇಶನಾಲಯವು ಆರೋಪ ಪಟ್ಟಿಯಲ್ಲಿ ಹೇಳಿದೆ.
ʻಜಾಕ್ವೆಲಿನ್ ಫೆರ್ನಾಂಡಿಸ್ ಅವರು ಸುಕೇಶ್ ಚಂದ್ರಶೇಖರ್ ಕ್ರಿಮಿನಲ್ ಪೂರ್ವಾಪರಗಳ ಬಗ್ಗೆ ಚೆನ್ನಾಗಿ ತಿಳಿದಿದ್ದರು. ಆದರೂ ಅವನೊಂದಿಗೆ ಹಣಕಾಸಿನ ವಹಿವಾಟುಗಳಲ್ಲಿ ತೊಡಗಿಸಿಕೊಳ್ಳುವುದನ್ನು ಮುಂದುವರೆಸಿದ್ದಾರೆ. ಇದರ ಹೊರತಾಗಿಯೂ, ಜಾಕ್ವೆಲಿನ್ ಫರ್ನಾಂಡೀಸ್ ಈ ಸತ್ಯವನ್ನು ನಿರ್ಲಕ್ಷಿಸಿ, ಸುಕೇಶ್ ಅವರೊಂದಿಗಿನ ಸಂಬಂಧವನ್ನು ಮುಂದುವರೆಸಿದ್ದು, ಸುಕೇಶ್ ಅವರಿಂದ ಆರ್ಥಿಕ ಪ್ರಯೋಜನಗಳನ್ನು ಪಡೆದಿದ್ದಾರೆ. ಅದು ಅಪರಾಧದ ಆದಾಯವಲ್ಲದೆ ಬೇರೇನೂ ಅಲ್ಲ ಎಂದು ತನಿಖೆ ಸಂಸ್ಥೆ ಹೇಳಿದೆ.
200 ಕೋಟಿ ರೂ. ಹಣ ವರ್ಗಾವಣೆ ಕೇಸ್ನಲ್ಲಿ ಜಾರಿ ನಿರ್ದೇಶನಾಲಯವು ಆಗಸ್ಟ್ ತಿಂಗಳ ಆರಂಭದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಆರೋಪಿ ಎಂದು ಹೆಸರಿಸಿತ್ತು.
BIGG NEWS : ಬೆಂಗಳೂರು ನಗರದಲ್ಲಿ ಮಳೆಯಿಂದಾಗಿ ಅವಾಂತರ : ಇಂದು ಸಿಎಂ ಬೊಮ್ಮಾಯಿ `ಸಿಟಿ ರೌಂಡ್ಸ್’
Viral Tweet : ಗಣೇಶ ಚತುರ್ಥಿ ಶುಭಾಶಯ ಕೋರಿದ ‘ವಿಜಯ್ ಮಲ್ಯ’, “ಇಂದು SBI ಮುಚ್ಚಿದೆ” ಎಂದು ಕಾಲೇಳೆದ ನೆಟ್ಟಿಗರು