ಕೆಎನ್ಎನ್ಡಿಜಿಟಲ್ ಡೆಸ್ಕ್ : ಜಗತ್ತಿನಲ್ಲಿ ಅನೇಕ ಚಿತ್ರ ವಿಚಿತ್ರ ಜೀವಿಗಳು ಕಂಡು ಬರುತ್ವೆ.. ಇನ್ನು ಹಲವು ಮತ್ತೆ ಪ್ರಕೃತಿಯ ರಹಸ್ಯದಲ್ಲಿ ಕಳೆದು ಹೋಗಿರುತ್ವೆ. ಪ್ರಕೃತಿಯ ಕೆಲವು ಸುಂದರ ಸೃಷ್ಟಿಗಳು ಮುದ್ದಾದ ಬಾತುಕೋಳಿಗಳು ಕೂಡ ಒಂದು. ಅವುಗಳಲ್ಲಿಯೂ ಹಲವು ಜಾತಿಗಳಿವೆ. ಅದ್ರಂತೆ, ಇಲ್ಲಿ ಕಾಣುವ ವರ್ಣರಂಜಿತ ಬಾತುಕೋಳಿಯನ್ನ ಮ್ಯಾಂಡರಿಯನ್ ಬಾತುಕೋಳಿಗಳು ಎಂದು ಕರೆಯಲಾಗುತ್ತದೆ, ಇವುಗಳು ಹೆಚ್ಚಾಗಿ ಚೀನಾ ಮತ್ತು ಜಪಾಪ್ನಲ್ಲಿ ಕಂಡು ಬರುತ್ತವೆ. ಈಗ ಈ ಪಕ್ಷಿಗಳು ಸಾಕಷ್ಟು ವಿರಳವಾಗಿದ್ದು, ಜನರಿಗೂ ಅವುಗಳ ಬಗ್ಗೆ ಕೊಂಚ ಮಾಹಿತಿಯಷ್ಟೇ ತಿಳಿದಿದೆ.
A male mandarin duck, this is their magnificent breeding plumage as they do moult into less vibrant colours out of season
these ducks are a symbol of love and fidelity in some countries as they are monogamous, life partners pic.twitter.com/kicM8RkyDS
— Science girl (@gunsnrosesgirl3) August 19, 2022
ಮ್ಯಾಂಡರಿನ್ ಬಾತುಕೋಳಿಗಳನ್ನ ವಿಶ್ವದ ಅತ್ಯಂತ ಸುಂದರವಾದ ಬಾತುಕೋಳಿ ಎಂದು ಪರಿಗಣಿಸಲಾಗಿದೆ. ಯಾಕಂದ್ರೆ, ಅವುಗಳ ಸೌಂದರ್ಯವು ವಿಭಿನ್ನವಾಗಿದೆ. ಕ್ಯಾನ್ವಾಸ್ನಂತೆ, ಅವುಗಳನ್ನ ವಿವಿಧ ಬಣ್ಣಗಳ ವಿವಿಧ ಛಾಯೆಗಳೊಂದಿಗೆ ಅಲಂಕರಿಸಲಾಗುತ್ತದೆ. ಅವು ಮೂಲತಃ ಚೀನಾ ಮತ್ತು ಜಪಾನ್ ಸೇರಿವೆ. ಮ್ಯಾಂಡರಿನ್ ಬಾತುಕೋಳಿಗಳು ಸಣ್ಣ ಕೊಳಗಳು, ಸರೋವರಗಳಲ್ಲಿ ವಾಸಿಸಲು ಇಷ್ಟಪಡುತ್ವೆ. ಇನ್ನು ಕುತೂಹಲಕಾರಿಯಾಗಿ, ಅವುಗಳ ರೆಕ್ಕೆಗಳು ಎಷ್ಟು ಪ್ರಬಲವಾಗಿವೆ ಅಂದ್ರೆ ಅವು ಮರಗಳ ಮೇಲೆ ಹಾರಬಲ್ಲವು. ಮ್ಯಾಂಡರಿನ್ ಬಾತುಕೋಳಿಗಳ ವಿಶೇಷತೆಯು ಅವುಗಳ ಗರಿಗಳು, ಅವುಗಳಿಗೆ ಸಹಾಯ ಮಾಡುವುದರ ಜೊತೆಗೆ ತುಂಬಾ ಸುಂದರವಾಗಿರುತ್ತದೆ.