ಧಾರವಾಡ: ಜಿಲ್ಲೆಯ ನವಲಗುಂದದಲ್ಲಿ ಮಳೆಯ ಅಬ್ಬರ ಜೋರಾಗಿದೆ. ಮಳೆಯ ಪ್ರವಾಹ ರಭಸಕ್ಕೆ ರಸ್ತೆ ಕುಸಿದು ಹೋಗಿದ್ದು, ವ್ಯಕ್ತಿ ಕೊಚ್ಚಿ ಹೋಗಿದ್ದಾನೆ. ರಸ್ತೆಯಲ್ಲಿ ಕುಸಿದು ನೀರಿನಲ್ಲಿ ವ್ಯಕ್ತಿ ಕೊಚ್ಚಿ ಹೋಗಿದ್ದಾರೆ.
ಆದರೆ ಅಲ್ಲಿ ಹುಣಸೆಮರ ಏರಿ ವ್ಯಕ್ತಿ ಜೀವ ಉಳಿಸಿಕೊಂಡಿದ್ದಾರೆ. ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಬಂದು ಆ ವ್ಯಕ್ತಿಯನ್ನು ರಕ್ಷಣೆ ಮಾಡಿದ್ದಾರೆ.ಇನ್ನು ಮಳೆಯ ಅವಾಂತರ ಜಾಸ್ತಿಯೇ ಆಗುತ್ತಿದೆ. ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ. ರಸ್ತೆಗಳೆಲ್ಲ ಕುಸಿದು ಬಿದ್ದಿದ್ದು, ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡಿದೆ.