ಮಂಡ್ಯ : ಲೋಕಸಭಾ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸ್ವೀಕರಿಸುವ ವಿಚಾರವಾಗಿ ಮಂಡ್ಯದಿಂದ ಸಿಎಸ್ ಪುಟ್ಟರಾಜು ಅಭ್ಯರ್ಥಿ ಅಂತಾ ಹೇಳಿ ಇದೀಗ ತಾವೇ ಅಭ್ಯರ್ಥಿಯಾಗಿದ್ದಾರೆ. ಮಗನಿಗೆ ಮದುವೆ ಮಾಡಲು ಹೋಗಿ ಅಪ್ಪನೇ ಮದುವೆ ಆದಂತೆ ಆಗಿದೆ ಎಂದು ಎಚ್‌ಡಿ ಕುಮಾರಸ್ವಾಮಿ ಸ್ಪರ್ಧೆ ಸಚಿವ ಚಲುವರಾಯಸ್ವಾಮಿ ವ್ಯಂಗ್ಯವಾಡಿದರು.
BREAKING : ಉಚಿತ ಕೊಡುಗೆಗಳ ಕುರಿತು ‘ಹೆಚ್.ಡಿ ದೇವೇಗೌಡ’ ದೂರು ; ತಕ್ಷಣ ಕ್ರಮಕ್ಕೆ ‘ಚುನಾವಣಾ ಆಯೋಗ’ ಸೂಚನೆ
ಇಂದು ಮಂಡ್ಯದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಚಿವ ಚೆಲುವರಾಯಸ್ವಾಮಿ ಮೊದಲುಮಂಡ್ಯ ಕ್ಷೇತ್ರಕ್ಕೆ ಸಿಎಸ್ ಪುಟ್ಟರಾಜು ಅಭ್ಯರ್ಥಿ ಎಂದು ಹೇಳಿಕೊಂಡು ತಿರುಗಾಡ್ತಿದ್ರು. ಇದೀಗ ತಾವೇ ಅಭ್ಯರ್ಥಿ ಆಗಿದ್ದಾರೆ. ಒಳ್ಳೇ ಹುಡುಗಿ ಇದ್ದಾಳೆ ನಾನೇ ಮದುವೆ ಆಗ್ತೇನೆ. ಪುಟ್ಟರಾಜು ನಿನಗೆ ಮುಂದೆ ಒಳ್ಳೆ ಹುಡುಗಿ ಹುಡುಕೋಣ ಅಂದಿದ್ದಾರೆ ಎಂದು ವ್ಯಂಗ್ಯವಾಡಿದರು.
BREAKING : ‘CUET UG’ ಅರ್ಜಿ ಸಲ್ಲಿಕೆ ಗಡುವು ವಿಸ್ತರಣೆ, ಹೊಸ ದಿನಾಂಕ ಹೀಗಿದೆ! CUET UG 2024
ಕಳೆದ ಚುನಾವಣೆಯಲ್ಲಿ ಸಂಸದೆ ಸುಮಲತಾರನ್ನ ಇದೇ ಕುಮಾರಸ್ವಾಮಿ ನಿಂದಿಸಿದ್ರು. ಈಗ ಸುಮಲತಾ ನನ್ನ ಸಹೋದರಿ ಇದ್ದಂಗ, ಅಕ್ಕ ಇದ್ದಂಗ ಅಂತಿದ್ದಾರೆ. ಕಳೆದ ಚುನಾವಣೆಯಲ್ಲಿ ಈ ಮಾತು ಆಡಬೇಕಿತ್ತು. ಸುಮಲತಾ ನನ್ನ ಸಹೋದರಿ ಅಲ್ವಾ ಅವರೇ ಗೆಲ್ಲಲಿ, ನನ್ನ ಮಗ ಗೆದ್ದರೂ ಒಂದೇ, ಅಕ್ಕ ಸುಮಲತಾ ಗೆದ್ದರೂ ಒಂದೇ ಎಂದಿದ್ರೆ ಪಾಪ ಅಂಬರೀಶ್ ಅವರ ಆತ್ಮಕ್ಕೆ ಶಾಂತಿ ಸಿಗುತ್ತಿತ್ತು. ಆದರೆ ಅಂದು ಬಾಯಿಗೆ ಬಂದಂತೆ ಮಾತಾಡಿದರು. ವೈಯಕ್ತಿಕ ತೇಜೋವಧೆ ಮಾಡಿದ್ರು. ಈಗ ಬಿಜೆಪಿ ಜೆಡಿಎಸ್ ಮೈತ್ರಿ ಆದ ಬಳಿಕ ಸುಮಲತಾ ಸಹೋದರಿ ಅಂತಾ ಹೇಳುತ್ತಿದ್ದಾರೆ ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.