ಗದಗ:ಮುಸ್ಲಿಂ ಪ್ರಧಾನಿ ಆಗ್ಬೇಕು ಅನ್ನೋದು ಹುಚ್ಚು ಕಲ್ಪನೆ. ಕಲ್ಪನೆ ಕಲ್ಪನೆಯೇ ಹೊರತು ಸಹಕಾರ ಆಗೋದಕ್ಕೆ ಸಾಧ್ಯವಿಲ್ಲ ಸಚಿವ ಬಿ.ಸಿ ಪಾಟೀಲ್ ಎಂದರು.
ನಗರದಲ್ಲಿ ಮಾತನಾಡಿದ ಅವರು, ಭಾರತಕ್ಕೆ ಮುಸ್ಲಿಂ ಪ್ರಧಾನಿ ಆಗ್ಬೇಕು ಎಂಬ ಟ್ವಿಟ್ಟರ್ ಅಭಿಯಾನ, ಕೆಲ ನಾಯಕರ ಹೇಳಿಕೆಗೆ ಕಿಡಿಕಾರಿದರು.ಮುಸ್ಲಿಂ ಪ್ರಧಾನಿ ಆಗ್ಬೇಕು ಅನ್ನೋದು ಹುಚ್ಚು ಕಲ್ಪನೆಯಾಗಿದೆ. ಅಲ್ಲದೇ ಇದು ಭಾರತ ದೇಶವಾಗಿದ್ದು, ಇಲ್ಲಿ ಮುಸ್ಲಿಂ ಪ್ರಧಾನಿ ಆಗಲ್ಲ, ಆಗೋದಕ್ಕೆ ಸಾಧ್ಯವೂ ಇಲ್ಲ ಅಂತ ವಿವಾದಾತ್ಮಕ ಹೇಳಿಕೆ ನೀಡಿದರು.
ಸಿದ್ದರಾಮಯ್ಯ ವಿರುದ್ಧದ ಕಿಕ್ ಬ್ಯಾಕ್ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಹಿಂದೆ ಅವರ ಮೇಲಿನ ಆರೋಪಗಳಿಂದ ರಕ್ಷಣೆ ಪಡೆಯಲು ಲೋಕಾಯುಕ್ತ ಮುಚ್ಚಿ ಎಸಿಬಿ ರಚನೆ ಮಾಡಿದ್ದೇ ಅದಕ್ಕೆ ಸಾಕ್ಷಿಯಾಗಿದೆ. ಹಾಗಾದ್ರೆ ಸ್ಟೀಲ್ ಬ್ರಿಜ್ಡ್ ಯಾಕೆ ವಾಪಾಸ್ ಹೋಯ್ತು? ಕಿಕ್ ಬ್ಯಾಕ್ ಆರೋಪ ಬಂದಿದ್ದಕ್ಕೆ ವಾಪಾಸ್ ಹೋಯ್ತುಲ್ಲಾ ಅಂತ ಟಾಂಗ್ ನೀಡಿದರು