ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಟ ದರ್ಶನ್ ವಿರುದ್ಧ ಹಲವರು ಟೀಕೆ ಟಿಪ್ಪಣಿ ಮಾಡುತ್ತಿದ್ದಾರೆ, ಇನ್ನೂ ಕೆಲವರು ನಟ ದರ್ಶನ್ ಪರವಾಗಿ ನಿಂತಿದ್ದಾರೆ. ಇದೀಗ ಈ ಒಂದು ಸಾಲಿಗೆ ನಟಿ ಭಾವನಾ ಅವರು ಕೂಡ ಸೇರ್ಪಡೆಯಾಗಿದ್ದಾರೆ.
ಹೌದು ದರ್ಶನ್ ಪ್ರಕರಣಕ್ಕೆ ಸಂಬಂಧಿಸಿ ಅನೇಕರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕೆಲವರು ದರ್ಶನ್ ಪರ ನಿಂತರೆ ಇನ್ನೂ ಕೆಲವರು ದರ್ಶನ್ ಅವರನ್ನು ವಿರೋಧಿಸಿದ್ದಾರೆ. ದರ್ಶನ್ ಮಾಡಿದ್ದನ್ನು ತಪ್ಪು ಎಂದು ಕೆಲವರು ಕರೆದಿದ್ದಾರೆ. ಆದರೆ, ಭಾವನಾ ರಾಮಣ್ಣ ಅವರು ದರ್ಶನ್ ಪರ ನಿಂತಿದ್ದಾರೆ.
ದರ್ಶನ್ ಪರವಾಗಿ ಮಾತನಾಡಿದ ನಟಿ ಭಾವನಾ ಅವರು, ಯಾವುದೇ ಹೆಣ್ಣಾದರೂ ಅವರಿಗೆ ಮನೆ ಇರುತ್ತದೆ, ಮನಸ್ಸು ಇರುತ್ತದೆ. 19 ವರ್ಷದ ಹುಡುಗಿಗೆ ಈ ರೀತಿ ಮೆಸೇಜ್ ಬಂದಿದ್ದರೆ ಅವಳು ಆತ್ಮಹತ್ಯೆ ಮಾಡಿಕೊಳ್ಳಬಹುದು. ಘೋರ ಕೃತ್ಯ ನಡೆದ ಬಳಿಕ ಅದರ ಬಗ್ಗೆ ಚರ್ಚೆ ನಡೆಸಬಹುದು ಅಷ್ಟೇ, ಆದರೆ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.
ಭಾರತೀಯರು ಎಮೋಷನಲ್ ಪರ್ಸನಲ್. ದರ್ಶನ್ ಜೊತೆ ಹಲವು ಸಿನಿಮಾ ಮಾಡಿದ್ದೇನೆ. ಫ್ರೆಂಡ್ಲಿ ಆಗಿ ನಾವು ಸಾಕಷ್ಟು ಬಾರಿ ಸೇರಿದ್ದೇವೆ. ನಾನು ದರ್ಶನ್ ಪರವಾಗಿ ನಿಲ್ಲುತ್ತೇನೆ. ಸಂತೋಷವಾಗಿ ಭಾಗಿ ಆಗಿ ದುಃಖದಲ್ಲಿ ಭಾಗಿ ಆಗಿಲ್ಲ ಎಂದರೆ ತಪ್ಪಾಗುತ್ತದೆ ಎಂದು ತಿಳಿಸಿದ್ದಾರೆ.