ಮೈಸೂರು: ಅಜ್ಜಿ ಮನೆಗೆ ಬಂದಿದ್ದ ಬಾಲಕ ಟ್ರ‍್ಯಾಕ್ಟರ್‌ಗೆ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ನಂಜನಗೂಡು (Nanjangudu) ತಾಲೂಕಿನ ದೇವರಸನಹಳ್ಳಿಯ ವರ್ಷದ ಬಾಲಕ ಭವಿಷ್ ದಾರುಣವಾಗಿ ಸಾವನ್ನಪ್ಪಿದ್ದಾರೆ. ತನ್ನ ತಾಯಿಯ ಜೊತೆ ಅಜ್ಜಿಯ ಮನೆಗೆಂದು ಭವಿಷ್ (8) ಬಂದಿದ್ದ ವೇಳೆಯಲ್ಲಿ ಈಘಟನೆ ನಡೆದಿದೆ. ಬಾಲಕನ ಒತ್ತಾಯಕ್ಕೆ ಟ್ರ್ಯಾಕ್ಟರ್ ಮೇಲೆ ಸೋದರಮಾವ ಕೂರಿಸಿದ್ದಾರೆ. ಉಳುಮೆ ಮಾಡುತ್ತಿದ್ದ ವೇಳೆ ಟ್ರ್ಯಾಕ್ಟರ್ನಿಂದ ಆಯತಪ್ಪಿ ಬಾಲಕ ಕೆಳಗೆ ಬಿದ್ದು, ಟ್ರ್ಯಾಕ್ಟರ್ನ ರೋಟರಿಗೆ ಸಿಲುಕಿದಾಗ ದೇಹ ತುಂಡಾಗಿ ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಘಟನೆ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.