ಬೆಂಗಳೂರು : ಇಂದು ಜೆಡಿಎಸ್ 25 ವರ್ಷಗಳ ರಜತ ಮಹೋತ್ಸವ ಸಂಭ್ರಮಾಚರಣೆ ಅಂಗವಾಗಿ ಪಕ್ಷದ ರಾಜ್ಯ ಕಛೇರಿ ಜೆ.ಪಿ. ಭವನದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಮಹಾ ಅಧಿವೇಶನ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಸಿದ್ದರಾಮಯ್ಯ ಅವರನ್ನು ಡಿಸಿಎಂ ಮಾಡಿದ್ದು ಇದೇ ದೇವೇಗೌಡರು. ಈಗ ಸಿದ್ದರಾಮಯ್ಯ ಅವರು ನಡೆದು ಬಂದ ಹಾದಿಯನ್ನು ಮರೆತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದ ಮುಖ್ಯಮಂತ್ರಿ ಸಿದ್ರಾಮಣ್ಣ ಅವರು ನಡೆದು ಬಂದ ದಾರಿ ಮರೆತಿದ್ದಾರೆ. ಇದು ಅವರಿಗೆ ಮಾಡಿಕೊಳ್ಳುತ್ತಿರುವ ಅನ್ಯಾಯ. ನೀವು ಹಿರಿಯರು, ಅನುಭವಿಗಳು ಗೌರವಿಸುತ್ತೇವೆ. ಜನತಾಪರಿವಾರದಲ್ಲಿ ಅಂದು ದೊಡ್ಡ ದೊಡ್ಡ ನಾಯಕರಿದ್ದರು. ಅವರೆಲ್ಲರನ್ನ ಬಿಟ್ಟು ಸಿದ್ದರಾಮಯ್ಯ ಅವರನ್ನ ಹಣಕಾಸು ಬಜೆಟ್ ಮಂಡನೆ ಮಾಡಿಸುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದು ದೇವೇಗೌಡರು.
ಇದು ಪಕ್ಷ ಮಾಡಿದ್ದು. ಅವರನ್ನ ಉಪಮುಖ್ಯಮಂತ್ರಿಯ ಸ್ಥಾನಕ್ಕೆ ಕರೆದುಕೊಂಡು ಹೋಗಿದ್ದು ಇದೇ ದೇವೇಗೌಡರು. ಈಗ ನಡೆದು ಬಂದ ದಾರಿ ಮರೆತಿದ್ದಾರೆ. ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಬದ್ಧತೆ ದೃಷ್ಟಿಯಲ್ಲಿ, ಎಲ್ಲರನ್ನು ಸಮಾನತೆ ದೃಷ್ಟಿಯಿಂದ ಬೆಳೆಸುವ ಗುಣ ಕರ್ನಾಟಕದಲ್ಲಿ ಯಾರಿಗಾದ್ರು ಇದ್ರೆ ಅದು ಸನ್ಮಾನ್ಯ ದೇವೇಗೌಡರಿಗೆ. ಈಗ ಸಿದ್ರಾಮಣ್ಣ ನಮ್ಮ ಪಕ್ಷದ ಬಗ್ಗೆ ಲಘುವಾಗಿ ಮಾತಡ್ತಾರೆ. ಅವರು ಬೆಳೆದು ಬಂದ ದಾರಿ ಮರೆತಿದ್ದಾರೆ. ಅವರಿಗೆ ದೇವರು ಒಳ್ಳೇದು ಮಾಡಲಿ ಎಂದು ಹೇಳಿದರು.








