ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಕಾಡು ಬಸಳೆ ಎಲೆ ದಪ್ಪವಾಗಿದ್ದು, ರುಚಿ ಹುಳಿಯಾಗಿರುತ್ತೆ. ಈ ಸಸ್ಯವು ಆಂಟಿಬ್ಯಾಕ್ಟೀರಿಯಲ್, ಆಂಟಿವೈರಲ್, ಆಂಟಿಮೈಕ್ರೊಬಿಯಲ್, ಆಂಟಿಫಂಗಲ್, ಆಂಟಿಹಿಸ್ಟಮೈನ್ ಮತ್ತು ಅನಾಫಿಲ್ಯಾಕ್ಟಿಕ್ ಗುಣಲಕ್ಷಣಗಳನ್ನ ಹೊಂದಿದೆ.
ಕಾಡು ಬಸಳೆ ಎಲೆಯನ್ನ ತಿಂದು, ರಸ ಮಾಡಿ ತೆಗೆದುಕೊಳ್ಳುವುದರಿಂದ, ಎಲೆಯನ್ನು ರುಬ್ಬಿ ಕಟ್ಟು ಹಾಕುವುದರಿಂದ ಅನೇಕ ಉಪಯೋಗಗಳಿವೆ. ಕಾಡು ಬಸಳೆ ಎಲೆಗಳನ್ನ ತಿಂದರೆ 150ಕ್ಕೂ ಹೆಚ್ಚು ಕಾಯಿಲೆಗಳು ಗುಣವಾಗುತ್ತವೆ ಎಂದು ವೈದ್ಯಕೀಯ ತಜ್ಞರು ಬಹಿರಂಗಪಡಿಸಿದ್ದಾರೆ. ಜೀರ್ಣಾಂಗದಲ್ಲಿ ಹುಣ್ಣುಗಳು ಕಡಿಮೆಯಾಗುತ್ತವೆ. ಅಜೀರ್ಣ ಮತ್ತು ಮಲಬದ್ಧತೆ ಸಮಸ್ಯೆಗಳನ್ನ ತಡೆಯುತ್ತದೆ.
ಕಾಡು ಬಸಳೆ ಎಲೆಗಳು ಕಿಡ್ನಿ ಸಮಸ್ಯೆಗಳನ್ನು ತಡೆಯುತ್ತದೆ. ಮೂತ್ರಕೋಶದಲ್ಲಿನ ಕಲ್ಲುಗಳು ಕರಗುತ್ತವೆ. ಡಯಾಲಿಸಿಸ್ ರೋಗಿಗಳಿಗೆ ಒಳ್ಳೆಯದು. ಮೂತ್ರಪಿಂಡದ ಕಾರ್ಯವನ್ನ ಸುಧಾರಿಸುತ್ತದೆ. ಕಾಡು ಬಸಳೆ ಸಸ್ಯವು ಬ್ಯಾಕ್ಟೀರಿಯಾ ವಿರೋಧಿ, ಆಂಟಿವೈರಲ್, ಆಂಟಿವೈರಲ್, ಆಂಟಿಫಂಗಲ್ ಮತ್ತು ಅನಾಫಿಲ್ಯಾಕ್ಟಿಕ್ ಗುಣಗಳಿಂದ ಸಮೃದ್ಧವಾಗಿದೆ.
ಕಾಮಾಲೆ ಪೀಡಿತರು ಬೆಳಿಗ್ಗೆ ಮತ್ತು ಸಂಜೆ ಈ ಎಲೆಗಳ ರಸವನ್ನ 30 ಮಿಲಿ ಸೇವಿಸಿದರೆ ಗುಣವಾಗುತ್ತದೆ. ಕಾಡು ಬಸಳೆ ಎಲೆಗಳನ್ನ ತಿನ್ನುವುದರಿಂದ ಅಧಿಕ ರಕ್ತದೊತ್ತಡವನ್ನ ಕಡಿಮೆ ಮಾಡಬಹುದು. ಮೂತ್ರದಲ್ಲಿ ರಕ್ತ ಮತ್ತು ಕೀವು ಮುಂತಾದ ಸಮಸ್ಯೆಗಳನ್ನು ತಡೆಯುತ್ತದೆ. ಕಾಡು ಬಸಳೆಯಲ್ಲಿ ಶೀತ, ಕೆಮ್ಮು ಮತ್ತು ಭೇದಿಗಳನ್ನ ಗುಣಪಡಿಸುವ ಗುಣವಿದೆ.
ಕಾಡು ಬಸಳೆ ಎಲೆಗಳ ಪೇಸ್ಟ್ ಹಣೆಯ ಮೇಲೆ ಹಚ್ಚುವುದರಿಂದ ತಲೆನೋವು ಕಡಿಮೆಯಾಗುತ್ತದೆ. ಕೂದಲು ಉದುರುವುದನ್ನ ಕಡಿಮೆ ಮಾಡುತ್ತದೆ. ಬಿಳಿ ಕೂದಲು ತಡೆಯುತ್ತದೆ. ಇದರ ಎಲೆಗಳನ್ನ ಬಿಸಿ ಮಾಡಿ ಗಾಯಗಳ ಮೇಲೆ ಇಡುವುದರಿಂದ ಗಾಯಗಳು ಬೇಗ ವಾಸಿಯಾಗುತ್ತದೆ. ಈ ಎಲೆಗಳನ್ನ ಪುಡಿಮಾಡಿ ತಲೆಯ ಮೇಲೆ ಇಟ್ಟುಕೊಂಡರೆ ತಲೆನೋವು ಕಡಿಮೆಯಾಗುತ್ತದೆ. ಈ ಎಲೆಗಳ ರಸದ ಎರಡು ಹನಿಗಳನ್ನ ಕಿವಿಗೆ ಹಾಕಿದರೆ ಕಿವಿನೋವು ಕಡಿಮೆಯಾಗುತ್ತದೆ.
ಕನ್ನಡಿಗರೇ…ಸಂಕಷ್ಟದಲ್ಲಿರುವ ಕೇರಳದ ಜನರಿಗೆ ಸಹಾಯ ಮಾಡಬೇಕಾ? ಜಸ್ಟ್ ಹೀಗೆ ಮಾಡಿ..!
BREAKING : ಪ್ಯಾರಿಸ್ ಒಲಿಂಪಿಕ್ : ಸಿಂಧು ಬಳಿಕ 16ನೇ ಸುತ್ತಿಗೆ ‘ಲಕ್ಷ್ಯ ಸೇನ್’ ಲಗ್ಗೆ |Paris Olympic 2024
BIG UPDATE : ವಯನಾಡು ಭೂಕುಸಿತ ಪ್ರಕರಣ :’200’ರ ಗಡಿ ಸಮೀಪಸಿದ ಮೃತರ ಸಂಖ್ಯೆ!