ಬೆಂಗಳೂರು : ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಲೋಕಸಭಾ ಟಿಕೆಟ್ ಸಿಗದೇ ಇರುವುದಕ್ಕೆ ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡ ಅಸಮಾಧಾನ ಹೊರಹಾಕಿದ್ದು ಎಲ್ಲಾ ನಮ್ಮವರಿಗೆ ಸಂಬಂಧಿಗಳಿಗೆ ನಮ್ಮ ಚೇಲಾಗಳಿಗೆ ಸಿಗಬೇಕೆಂಬುದು ಸ್ವಾರ್ಥ ಎಂದು ಪರೋಕ್ಷವಾಗಿ ಬಿಎಸ್ ಯಡಿಯೂರಪ್ಪ ವಿರುದ್ಧ ಡಿವಿ ಸದಾನಂದ ಗೌಡ ಅಸಮಾಧಾನ ಹೊರ ಹಾಕಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷ ಶುದ್ದೀಕರಣ ಒಬ್ಬನಿಂದ ಆಗುವಂತಹ ಕೆಲಸವಲ್ಲ. ಪಕ್ಷ ಶುದ್ಧೀಕರಣಕ್ಕೆ ನಿರಂತರವಾದ ಹೋರಾಟ ಮಾಡುತ್ತೇನೆ.ಪಕ್ಷದ ಜವಾಬ್ದಾರಿ ವಹಿಸಿಕೊಂಡವರು ಸ್ವಾರ್ಥಿಗಳಾಗಿದ್ದಾರೆ ಎಲ್ಲವೂ ನಮ್ಮವರಿಗೆ ಸಂಬಂಧಿಗಳಿಗೆ ಚೇಲಾಗಳಿಗೆ ಸಿಗಬೇಕು.ಎಲ್ಲವೂ ನಮಗೆ ನಮ್ಮವರಿಗೆ ಸಿಗಬೇಕು ಎಂಬ ಸ್ವಾರ್ಥವಿದೆ. ಅಲ್ಲದೆ ಪಕ್ಷದಲ್ಲಿ ಕಾರ್ಯಕರ್ತರಿಗೆ ಯಾವುದೇ ರೀತಿಯಾದಂತಹ ಅವಕಾಶ ಕೊಡುತ್ತಿಲ್ಲ ಎಂದು ಯಡಿಯೂರಪ್ಪ ವಿರುದ್ಧ ಸನಂದ ಗೌಡ ಕಿಡಿ ಕಾರಿದ್ದಾರೆ.
ಡೀಪ್ ಫೇಕ್ ವೀಡಿಯೊ : 100,000 ಡಾಲರ್ ಪರಿಹಾರ ಕೋರಿದ ಇಟಲಿ ಪ್ರಧಾನಿ ಜಿಯೋರ್ಜಿಯಾ ಮೆಲೋನಿ
ನನಗೆ ಕಾಂಗ್ರೆಸ್ ನಿಂದ ಆಫರ್ ಬಂದಿರುವುದು ಸತ್ಯ. ಕಾಂಗ್ರೆಸ್ ನಿಂದ ನೀವು ಎಲ್ಲೇ ನಿಲ್ಲಿಸಿಕೊಳ್ಳುತ್ತೇವೆ ಅನ್ಯಾಯಕ್ಕೆ ನಿಮ್ಮ ಜೊತೆ ನಿಲ್ಲುತ್ತೇವೆ ಎಂದು ಆಫರ್ ಬಂದಿದೆ ಹೀಗೆ ನನಗೆ ಕಾಂಗ್ರೆಸ್ ನವರು ಆಹ್ವಾನ ನೀಡಿದ್ದರು. ಆದರೆ ನನಗೆ ಬಿಜೆಪಿ ಟಿಕೆಟ್ ತಪ್ಪಿದ್ದಕ್ಕೆ ತುಂಬಾ ನೋವಾಗಿದೆ. ಇದೆ ವೇಳೆ ಕಾಂಗ್ರೆಸ್ ಪಕ್ಷದಿಂದ ಆಹ್ವಾನ ಬಂದಿರುವುದು ಕೂಡ ಸತ್ಯ ಆದರೆ ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಸೇರುವುದಿಲ್ಲ ಎಂದು ಸದಾನಂದ ಗೌಡ ತಿಳಿಸಿದರು.
ಅವಧಿ ಮುಗಿದ 30 ದಿನಗಳ ಒಳಗೆ ‘ವಾಹನ ಚಾಲನಾ ಪರವಾನಿಗೆ’ ನವೀಕರಿಸಿ : ಹೈಕೋರ್ಟ್ ಆದೇಶ
ಪಕ್ಷ ಶುದ್ಧೀಕರಣ ಮಾಡುವುದು ನನ್ನ ಮುಖ್ಯ ಉದ್ದೇಶವಾಗಿದೆ, ಮುಂದಿನ ದಿನಗಳಲ್ಲಿ ಅವರು ಖಂಡಿತವಾಗಿಯೂ ಪಶ್ಚಾತಾಪ ಪಟ್ಟೆ ಪಡುತ್ತಾರೆ, ಟಿಕೆಟ್ ಕೈತಪ್ಪಿದ್ದಕ್ಕೆ ಡಿವಿಷನ್ ಗೌಡ ಅಸಮಾಧಾನವನ್ನು ಹೊರಹಾಕಿದ್ದಾರೆ. ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯುವುದಿಲ್ಲ ಮತ್ತು ಕಾಂಗ್ರೆಸ್ ಪಕ್ಷವನ್ನು ಸೇರುವುದಿಲ್ಲ ಮುಂದಿನ ನಡೆ ಏನು ಎಂದು ನನ್ನನ್ನು ಹಲವರು ಕೇಳಿದ್ದಾರೆ ನನ್ನ ಮುಂದಿನ ನಡೆ ಪಕ್ಷ ಸುದ್ದಿಕರಣ ಎಂದು ತಿಳಿಸಿದರು.