ಬೆಂಗಳೂರು : ಹೈಕಮಾಂಡ್ ಬೇಟಿಗೆ ಕಾಂಗ್ರೆಸ್ ಶಾಸಕರು ದೆಹಲಿಗೆ ತೆರಳಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು ಶಾಸಕರು ಸಮರ್ಥರಾಗಿದ್ದು ಸಚಿವ ಸ್ಥಾನ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ತಿಳಿಸಿದರು.
ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸಚಿವ ಸ್ಥಾನಕ್ಕೆ ಕಾಂಗ್ರೆಸ್ ಶಾಸಕರು ಸಮರ್ಥರಾಗಿದ್ದಾರೆ ಹಾಗಾಗಿ ಸಚಿವ ಸ್ಥಾನ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಮಂತ್ರಿ ಮಾಡುವ ಬಗ್ಗೆ ಹೈಕಮಾಂಡ್ ಮತ್ತು ಸಿಎಂ ಸಿದ್ದರಾಮಯ್ಯ ನಿರ್ಧಾರ ಮಾಡುತ್ತಾರೆ. ಅದು ಗ್ಯಾಂಬ್ಲಿಂಗ್ ಅಲ್ಲ ಅರ್ಹತೆ ಇದೆ ಕೊಡಿ ಅನ್ನುವುದರಲ್ಲಿ ತಪ್ಪಿಲ್ಲ. ನಾಯಕತ್ವ ಬದಲಾವಣೆ ಸೇರಿ ಎಲ್ಲವನ್ನು ಹೈಕಮಾಂಡ್ ಮಾಡಬೇಕು.
ಹೊರಗಿನ ಪಂಚಕ್ಕೆ ಮೌನಿಯಾಗಿದ್ದಾರೆ ಅನಿಸುತ್ತೆ. ಯಾವಾಗ ಸಚಿವ ಸಂಪುಟ ಪುನರಚನೆ ಮಾಡಬೇಕು ಅಂತ ಹೈಕಮಾಂಡ್ ಅವರಿಗೆ ಗೊತ್ತಿದೆ. ಶಾಸಕರು ಒಟ್ಟಾಗಿ ಮಂತ್ರಿ ಸ್ಥಾನ ಕೇಳಲು ಹೋಗಿದ್ದಾರೆ ಅಷ್ಟೇ, ಹಿಂದೆಯೂ ಸಚಿವ ಸ್ಥಾನದ ಆಕಾಂಕ್ಷಿಗಳು ದೆಹಲಿಗೆ ಹೋಗಿದ್ದರು ಎಂದು ಜಿ ಪರಮೇಶ್ವರ್ ತಿಳಿಸಿದರು.








