ಮೈಸೂರು : ಇನ್ನೇನು ಎರಡು ದಿನಗಳಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೊಳ್ಳಲಿದ್ದು ಇದೇ ವಿಷಯವಾಗಿ ಕಾಂಗ್ರೆಸ್ ಹಲವು ನಾಯಕರು ಕರ್ನಾಟಕ ರಾಜ್ಯದಲ್ಲಿಯೂ ಕೂಡ 20 ಎಕರೆ ಜಾಗದಲ್ಲಿ ರಾಮಮಂದಿರ ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಿಕೆ ನೀಡಿದ್ದರು.ಇದೇ ವಿಷಯವಾಗಿ ಮೈಸೂರಿನಲ್ಲಿ ಪತ್ರಕರ್ತರು ಒಬ್ಬರು ಈ ಪ್ರಶ್ನೆಯನ್ನು ಸಂಸದ ಪ್ರತಾಪ್ ಸಿಂಹ ಅವರಿಗೆ ಕೇಳಿದಾಗ, ಪತ್ರಕರ್ತರ ಮೇಲೆ ಸಿಟ್ಟಾಗಿರುವ ಘಟನೆ ಜರುಗಿತು.
ರಾಮನಗರದಲ್ಲಿ ಸುಮಾರು 20 ಎಕರೆ ಜಾಗದಲ್ಲಿ ರಾಮಮಂದಿರ ನಿರ್ಮಾಣ ಮಾಡಲಾಗುತ್ತದೆ ಎಂಬ ಪತ್ರಕರ್ತರ ಪ್ರಶ್ನೆಗೆ ಸಂಸ್ಕೃತ ಪ್ರತಾಪ್ ಸಿಂಹ ತಡವರಿಸಿ ಮೊದಲು ನೀನು ಪತ್ರಕರ್ತ ಒಂದು ಕೋರ್ಸಿನ ಸರ್ಟಿಫಿಕೇಟ್ ತಗೊಂಡು ಬಾ ಆಮೇಲೆ ನನಗೆ ಬಂದು ಪ್ರಶ್ನೆ ಕೇಳು ಎಂದು ಸಿಟ್ಟಾಗಿರುವ ಘಟನೆ ಜರುಗಿದೆ. ಇದೇ ವಿಷಯವಾಗಿ ಕಾಂಗ್ರೆಸ್ ತನ್ನ ಟ್ವೀಟ್ ಖಾತೆಯಲ್ಲಿ ಪ್ರತಾಪ್ ಸಿಂಹ ವಿರುದ್ಧ ಕಿಡಿ ಕಾರಿದೆ.
ಪಾಸ್ ಕೊಟ್ಟಿದ್ದೇಕೆ ಎಂದು ಪ್ರಶ್ನಿಸಿದರೆ ಕ್ಯಾಮರಾ ಆಫ್ ಮಾಡಿ ಎನ್ನುತ್ತೀರಿ,ಬರದ ಬಗ್ಗೆ ಪ್ರಶ್ನಿಸಿದರೆ ಜೈ ಶ್ರೀರಾಮ್ ಎನ್ನುತ್ತೀರಿ,ಅದೇ ಕರ್ನಾಟಕದ ರಾಮನ ಬಗ್ಗೆ ಕೇಳಿದರೆ ಪತ್ರಕರ್ತರನ್ನೇ ಅವಮಾನಿಸುತ್ತೀರಿ,ಇದನ್ನು ಅಯೋಗ್ಯತನ ಎನ್ನದೆ ಇನ್ನೇನು ಹೇಳಬೇಕು ಪ್ರತಾಪ್ ಅವರೇ? ಎಂದು ಕಾಂಗ್ರೆಸ್ ಆಕ್ರೋಶ ಹೊರಹಾಕಿದೆ.
ಕಾಡುಗಳ್ಳ, ನಾಡುಗಳ್ಳರು ಪಲಾಯನವಾದಿಗಳಾಗುವುದು ಸಹಜವೇ ಬಿಡಿ!ಕರ್ನಾಟಕದ ರಾಮನಗರದಲ್ಲಿನ ರಾಮನ ಮಂದಿರ ಬಗೆಗಿನ ವಿಷಯ ನಿಮಗೆ ಅಪಥ್ಯವೇ? ಬರ ಪರಿಹಾರ ತರುವಲ್ಲಿ ನಿಮ್ಮ ನಿರ್ಲಕ್ಷ್ಯ ಧೋರಣೆಯ ಬಗೆಗಿನ ಪ್ರಶ್ನೆ ಅಸಹನೆ ಸೃಷ್ಟಿಸುತ್ತದೆಯೇ? ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.ಅಂದಹಾಗೆ, ಒಬ್ಬ ಸಂಸದನ ಅರ್ಹತೆ ನಿರ್ಧಾರವಾಗುವುದು ಫೇಸ್ಬುಕ್ ಲೈವ್ಗಳಿಂದಲ್ಲ, ಫಾಲೋಯರ್ಸ್ಗಳಿಂದಲ್ಲ.ನಿಮ್ಮ ಅರ್ಹತೆ, ಸಾಮರ್ಥ್ಯವನ್ನು ನೈಜ ಸಮಸ್ಯೆಗಳ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ನಿರೂಪಿಸಿ ಎಂದು ಕುಟುಕಿದೆ.
ಪಾಸ್ ಕೊಟ್ಟಿದ್ದೇಕೆ ಎಂದು ಪ್ರಶ್ನಿಸಿದರೆ ಕ್ಯಾಮರಾ ಆಫ್ ಮಾಡಿ ಎನ್ನುತ್ತೀರಿ,
ಬರದ ಬಗ್ಗೆ ಪ್ರಶ್ನಿಸಿದರೆ ಜೈ ಶ್ರೀರಾಮ್ ಎನ್ನುತ್ತೀರಿ,
ಅದೇ ಕರ್ನಾಟಕದ ರಾಮನ ಬಗ್ಗೆ ಕೇಳಿದರೆ ಪತ್ರಕರ್ತರನ್ನೇ ಅವಮಾನಿಸುತ್ತೀರಿ,
ಇದನ್ನು ಅಯೋಗ್ಯತನ ಎನ್ನದೆ ಇನ್ನೇನು ಹೇಳಬೇಕು @mepratap ಅವರೇ?ಕಾಡುಗಳ್ಳ, ನಾಡುಗಳ್ಳರು ಪಲಾಯನವಾದಿಗಳಾಗುವುದು ಸಹಜವೇ… pic.twitter.com/b0XVtvnSnu
— Karnataka Congress (@INCKarnataka) January 19, 2024