ಬೆಂಗಳೂರು: ರಾಜ್ಯಾಧ್ಯಂತ ಕನ್ನಡ ನಾಮಫಲಕವನ್ನು ಅಂಗಡಿ-ಮುಂಗಟ್ಟುಗಳಿಗೆ ಅಳವಡಿಸುವುದು ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ಹಾಕದೇ ಇದ್ರೆ ಈ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ, ದೂರು ನೀಡಬಹುದಾಗಿದೆ.
ರಾಜ್ಯ ಸರ್ಕಾರದಿಂದ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ರಾಜ್ಯಾದ್ಯಂತ ಕನ್ನಡ ನಾಮಫಲಕ ಅಳವಡಿಸುವುದು ಕಡ್ಡಾಯವಾಗಿದೆ. ತಪ್ಪಿಲ್ಲದೆ ಸರಿಯಾದ ಕನ್ನಡದಲ್ಲಿ ನಾಮಫಲಕ ಅಳವಡಿಸಲು ಸಲಹೆ, ಮಾರ್ಗದರ್ಶನದ ಅಗತ್ಯವಿದ್ದರೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಾಯವಾಣಿ 080-22286773 ಅಥವಾ 080-22256365 ಗೆ ಕರೆ ಮಾಡಬಹುದು.
ಇನ್ನೂ ನೀವು ಕನ್ನಡ ನಾಮಫಲಕ ಅಳವಡಿಸದ ಬಗ್ಗೆ ಇ-ಮೇಲ್ ಮೂಲಕವೂ ದೂರು ನೀಡಬಹುದಾಗಿದೆ. chairman.kanpra@gmail.com ಅಥವಾ secretary.kanpra@gmail.com ಗೆ ದೂರು ಸಲ್ಲಿಸಬಹುದಾಗಿದೆ.
ರಾಜ್ಯಾದ್ಯಂತ ಕನ್ನಡ ನಾಮಫಲಕ ಅಳವಡಿಸುವುದು ಕಡ್ಡಾಯವಾಗಿದೆ. ತಪ್ಪಿಲ್ಲದೆ ಸರಿಯಾದ ಕನ್ನಡದಲ್ಲಿ ನಾಮಫಲಕ ಅಳವಡಿಸಲು ಸಲಹೆ, ಮಾರ್ಗದರ್ಶನದ ಅಗತ್ಯವಿದ್ದರೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಾಯವಾಣಿ 080-22286773 ಅಥವಾ 080-22256365 ಗೆ ಕರೆ ಮಾಡಬಹುದು. #Kannadaboards@CMofKarnataka@siddaramaiah pic.twitter.com/wswwMYhW3G
— DIPR Karnataka (@KarnatakaVarthe) June 19, 2024
BIG NEWS: ‘ರಾಜ್ಯ ಸರ್ಕಾರಿ ನೌಕರ’ರು ತಪ್ಪದೇ ಈ ಕೆಲಸ ಮಾಡುವಂತೆ ಸರ್ಕಾರ ಸೂಚನೆ