ಬೆಂಗಳೂರು : ನಿನ್ನೆ ನಡೆದ ಸಿಇಟಿ ಪರೀಕ್ಷೆಯಲ್ಲಿ ಬೀದರ್ ಸುಚಿವೃತ ಕುಲಕರಣಿ ಎನ್ನುವ ವಿದ್ಯಾರ್ಥಿಗೆ ಪರೀಕ್ಷೆ ಬರೆಯುವ ವೇಳೆ ಜನಿವಾರ ತೆಗೆಸಿದ್ದು, ಇನ್ನು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಕೂಡ ಅಂತ ಜನಿವಾರ ಘಟನೆ ನಡೆದಿದೆ. ಇವೆರಡು ಘಟನೆಗಳು ಇದೀಗ ಬ್ರಾಹ್ಮಣ ಸಮಾಜದವರನ್ನು ಕೆರಳಿಸಿದ್ದು, ರಾಜ್ಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಇದೆ ವಿಚಾರವಾಗಿ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ಅವರು ಸ್ಪಷ್ಟನೆ ನೀಡಿದ್ದು, ಸಿಇಟಿ ಪರೀಕ್ಷಾ ವೇಳೆ ಕೆಲವು ನಿಯಮ ಪಾಲಿಸಬೇಕು. ವಿದ್ಯಾರ್ಥಿಗಳಿಗೆ ಡ್ರೆಸ್ ಕೋಡ್ ಇರುತ್ತದೆ. ಅದನ್ನು ಪಾಲಿಸಬೇಕು ಆದರೆ ಜನಿವಾರ ತಗಿಯಬೇಕೆಂಬ ನಿಯಮ ಇಲ್ಲ ಜನಿವಾರ ಹಾಕಬಾರದು ಎಂದು ನಾವು ಸೂಚನೆ ಕೊಟ್ಟಿಲ್ಲ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ಅವರು ಸ್ಪಷ್ಟನೆ ನೀಡಿದ್ದಾರೆ.
ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆಯ ಮುನ್ನ ಏನು ನಿಯಮ ಇರುತ್ತದೆ ಅಭ್ಯರ್ಥಿಗಳು ಅವೆಲ್ಲ ನಿಯಮಗಳು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿರುತ್ತೇವೆ. ಆದರೆ ಜನಿವಾರ ತೆಗೆಯಬೇಕು ಲಿಂಗದಕಾಯಿ ತೆಗೆಯಬೇಕು ಎಂಬ ನಿಯಮ ಎಲ್ಲಿಯೂ ಇಲ್ಲ ಹಾಗಾಗಿ ಈ ಎರಡು ಘಟನೆಗಳ ಕುರಿತು ಈಗಾಗಲೇ ಸಚಿವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಚಿವರು ಹೇಳಿಕೆ ನೀಡಿದ್ದಾರೆ ಎಂದು ಪ್ರಸನ್ನ ಅವರು ತಿಳಿಸಿದರು.