ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರಿಗೆ ಪತ್ರ ಬರೆದಿರುವ ವಕೀಲರ ‘ನ್ಯಾಯಾಂಗವು ರಾಜಕೀಯ ಒತ್ತಡದಿಂದ ಅಪಾಯದಲ್ಲಿದೆ’ ಎಂಬ ವಕೀಲರ ಪತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, “ಇತರರನ್ನ ಬೆದರಿಸುವುದು ಕಾಂಗ್ರೆಸ್ ಸಂಸ್ಕೃತಿ. 5 ದಶಕಗಳ ಹಿಂದೆಯೇ ಅವರು “ಬದ್ಧ ನ್ಯಾಯಾಂಗ”ಕ್ಕೆ ಕರೆ ನೀಡಿದ್ದರು – ಅವರು ನಾಚಿಕೆಯಿಲ್ಲದೆ ತಮ್ಮ ಸ್ವಾರ್ಥ ಹಿತಾಸಕ್ತಿಗಳಿಗಾಗಿ ಇತರರಿಂದ ಬದ್ಧತೆಯನ್ನ ಬಯಸುತ್ತಾರೆ. ಆದ್ರೆ, ರಾಷ್ಟ್ರದ ಬಗ್ಗೆ ಯಾವುದೇ ಬದ್ಧತೆಯಿಂದ ದೂರವಿರುತ್ತಾರೆ. 140 ಕೋಟಿ ಭಾರತೀಯರು ಅವರನ್ನು ತಿರಸ್ಕರಿಸುವುದರಲ್ಲಿ ಆಶ್ಚರ್ಯವೇನಿಲ್ಲ” ಎಂದಿದ್ದಾರೆ.
To browbeat and bully others is vintage Congress culture.
5 decades ago itself they had called for a "committed judiciary" – they shamelessly want commitment from others for their selfish interests but desist from any commitment towards the nation.
No wonder 140 crore Indians… https://t.co/dgLjuYONHH
— Narendra Modi (@narendramodi) March 28, 2024
1970 ರ ದಶಕದಲ್ಲಿ ಕಾಂಗ್ರೆಸ್ನ ಇಂದಿರಾ ಗಾಂಧಿ ಅವರು “ಬದ್ಧ ನ್ಯಾಯಾಂಗ” ವನ್ನು ಪ್ರತಿಪಾದಿಸಿದ ಸಮಯವನ್ನ ಪ್ರಧಾನಿ ಮೋದಿ ಉಲ್ಲೇಖಿಸಿದರು. ಆಗ ಕಾಂಗ್ರೆಸ್ ಸರ್ಕಾರವು ಮೂವರು ನ್ಯಾಯಾಧೀಶರನ್ನ ಹಿಂದಿಕ್ಕಿ ಸಿಜೆಐ ಆಗಿ ನೇಮಿಸಿತ್ತು ಮತ್ತು ಒಂದೆರಡು ವರ್ಷಗಳ ನಂತರ ಅದನ್ನ ಪುನರಾವರ್ತಿಸಿತು, ಇದು ಕಾನೂನು ಸಮುದಾಯದಿಂದ ಸಾಕಷ್ಟು ಪ್ರತಿರೋಧವನ್ನು ಸೆಳೆಯಿತು.
ಕೆಲಸದ ಹೊರೆ ಕಡಿಮೆಯಾದ್ರೆ ‘ವೇತನ ಕಡಿತ’ಕ್ಕೆ ಸಿದ್ಧವೆಂದ ‘ಶೇ.64ರಷ್ಟು ಉದ್ಯೋಗಿ’ಗಳು : ವರದಿ
BREAKING : ಯಾದಗಿರಿಯಲ್ಲಿ ಕುಡಿಯುವ ನೀರಿಗಾಗಿ ಗಲಾಟೆ : ಯುವಕನನ್ನು ಭೀಕರವಾಗಿ ಹತ್ಯೆಗೈದ ತಾಯಿ-ಮಗ
BREAKING : ಏಕನಾಥ್ ಶಿಂಧೆ ‘ಶಿವಸೇನೆ’ಗೆ ಬಾಲಿವುಡ್ ‘ನಟ ಗೋವಿಂದಾ’ ಸೇರ್ಪಡೆ