ಬೆಂಗಳೂರು : ಕಾವೇರಿ ನೀರು ಹಂಚಿಕೆಯ ವಿಚಾರವಾಗಿ ನಿನ್ನೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸರ್ವ ಪಕ್ಷ ಸಭೆ ನಡೆಯಿತು ಈ ಒಂದು ಸಭೆಗೆ ಕೇಂದ್ರ ಬಿಜೆಪಿ ಸಚಿವರಾದ ಎಚ್ ಡಿ ಕುಮಾರಸ್ವಾಮಿ ಗೈರಾಗಿದ್ದರು. ಈ ವಿಚಾರವಾಗಿ ಸಚಿವ ಚೆಲುವರಾಯಸ್ವಾಮಿ, ಸರ್ವ ಪಕ್ಷ ಸಭೆ ಬದಲು ಅವರು ಬಾಡೂಟಕ್ಕೆ ತೆರಳಿದ್ದು ದುರಂತ ಎಂದು ಎಚ್ ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ವ ಪಕ್ಷ ಸಭೆಗೆ ಕೇಂದ್ರ ಸಚಿವ ಕುಮಾರಸ್ವಾಮಿ ಗೈರು ವಿಚಾರವಾಗಿ ಸಭೆಗೆ ಮಂಡ್ಯ ಕ್ಷೇತ್ರದ ಸಂಸದ ಎಚ್ ಡಿ ಕುಮಾರಸ್ವಾಮಿ ಬಂದಿಲ್ಲ. ಅವರು ಬಾಡೂಟಕ್ಕೆ ಹೋಗಿದ್ದರು ಇದು ದುರಂತ ಅಲ್ಲವೇ ಎಂದು ವಿಧಾನಸೌಧದಲ್ಲಿ ಸಚಿವ ಎನ್ ಚೆಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.
ನಿನ್ನ ಸರ್ವಪಕ್ಷ ಸಭೆಗೆ ಕೇಂದ್ರದ ಯಾವ ಸಚಿವರು ಬಂದಿಲ್ಲ. ಪ್ರಹ್ಲಾದ ಜೋಶಿ, ಶೋಭಾ ಕರಂದ್ಲಾಜೆ, ವಿ.ಸೋಮಣ್ಣ ಬಂದಿಲ್ಲ. ಕನಿಷ್ಠ ರೈತರ ವಿಚಾರ ಬಂದಾಗ ಕುಮಾರಸ್ವಾಮಿ ಬರಬೇಕಿತ್ತು. ಅವರು ಮಾಜಿ ಮುಖ್ಯಮಂತ್ರಿ ಅಲ್ಲದೆ ದೇಶ ಆಳಿದ ಕುಟುಂಬದವರಾಗಿದ್ದಾರೆ.ಕಾವೇರಿ ವಿಚಾರಕ್ಕೆ ಮೊದಲ ಆದ್ಯತೆ ನೀಡುತ್ತೇನೆ ಎಂದಿದ್ದರು.ಎಚ್ ಡಿ ಕುಮಾರಸ್ವಾಮಿ ಗೈರಾಗಿದ್ದು ಮಂಡ್ಯದ ಜನರಿಗೆ ಮಾಡಿದ ಅಗೌರವ ಎಂದು ವಿಧಾನಸೌಧದಲ್ಲಿ ಸಚಿವ ಎಂಚವರಾಯಸ್ವಾಮಿ ವಾಗ್ದಾಳಿ ನಡೆಸಿದರು.