ಹುಬ್ಬಳ್ಳಿ : ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಮೈಸೂರು ಕ್ಷೇತ್ರಕ್ಕೆ ಪ್ರತಾಪ್ ಸಿಂಹ ಬದಲು ಯದುವೀರ್ ಒಡೆಯರ್ ಅವರನ್ನು ಕಣಕ್ಕಿಳಿಸುವ ಕುರಿತು ಬಿಜೆಪಿ ಚಿಂತಿಸುತ್ತಿದೆ ಎನ್ನುವ ವಿಚಾರವಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಪ್ರತಿಕ್ರಿಯೆ ನೀಡಿ ಪ್ರತಾಪ್ ಸಿಂಹಾಗೆ ಟಿಕೆಟ್ ತಪ್ಪುತ್ತೆ ಎನ್ನುವುದಿಲ್ಲ ಊಹಾಪೋಹ ಎಂದು ತಿಳಿಸಿದರು.
BREAKING : ಬೆಂಗಳೂರಿನ ಹೆದ್ದಾರಿಯಲ್ಲಿ ‘ವ್ಹೀಲಿಂಗ್’ ಹಾವಳಿ : 13 ಬೈಕ್ ಜಪ್ತಿ 6 ಜನರ ಬಂಧನ
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಈ ವಿಷಯವಾಗಿ ಯಾವುದೇ ವಿಚಾರ ಇಲ್ಲ ಪ್ರತಾಪ್ ಸಿಂಹನಿಗೆ ಟಿಕೆಟ್ ತಪ್ಪುತ್ತೆ ಎನ್ನುವುದಿಲ್ಲ ಊಹಾಪೋಹ.ಉಹಾಪೋಹಗಳಿಗೆ ನಾನು ಉತ್ತರಿಸಲ್ಲ. ಎರಡು ಬಾರಿ ಗೆದ್ದವರಿಗೂ ಪಕ್ಷ ಟಿಕೆಟ್ ಕೊಟ್ಟಿದೆ. ಎಂಟು ಸಲ ಗೆದ್ದವರಿಗೂ ಟಿಕೆಟ್ ಕೊಡಲಾಗಿದೆ. ಟಿಕೆಟ್ ಘೋಷಣೆ ಬಳಿಕ ವರಿಷ್ಠರು ಸಮಾಧಾನ ಮಾಡುತ್ತಾರೆ ಎಂದರು.
ಬಿಜೆಪಿ-ಜೆಡಿಎಸ್ ಪಕ್ಷಗಳದ್ದು ‘ಅಪವಿತ್ರ ಮೈತ್ರಿ’ : ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ
ಬಿಸಿ ಪಾಟೀಲ್ ಟಿಕೆಟ್ಗಾಗಿ ಪಟ್ಟು ಹಿಡಿದ ವಿಚಾರವಾಗಿ ಮಾತನಾಡಿದ ಅವರು, ಇದನ್ನು ನಮ್ಮ ಹೈಕಮಾಂಡ್ ನಾಯಕರು ತೀರ್ಮಾನ ಮಾಡುತ್ತಾರೆ. ಎಲ್ಲರ ಜೊತೆ ಮಾತನಾಡುತ್ತಾರೆ. ನಮ್ಮ ರಾಷ್ಟ್ರೀಯ ನಾಯಕರು ಟಿಕೆಟ್ ತೀರ್ಮಾನ ಆದ ಮೇಲೆ ಸಮಾಧಾನ ಮಾಡುತ್ತಾರೆ. ಮುಂದಿನ ಎರಡು ಮೂರು ದಿನಗಳಲ್ಲಿ ಟಿಕೆಟ್ ಫೈನಲ್ ಆಗಬಹುದು ಬಿಎಸ್ ಯಡಿಯೂರಪ್ಪ ಹಾಗೂ ನಾನು ದೆಹಲಿಗೆ ಹೋಗಬೇಕಿತ್ತು. ಎಲೆಕ್ಷನ್ ಕಮೀಟಿ ಮೀಟಿಂಗ್ ಮುಂದಕ್ಕೆ ಹೋಗಿದೆ ಎಂದರು.
BREAKING :ಬೆಂಗಳೂರಲ್ಲಿ ‘ಬೋರ್ವೆಲ್’ ಕೊರೆಯೋಕೆ ಅನುಮತಿ ಕಡ್ಡಾಯ: ಮಾ.15ರ ನಿಯಮ ಜಾರಿ ಮಾಡಿ ಜಲಮಂಡಳಿ ಆದೇಶ