ಬೆಂಗಳೂರು : ಒಬ್ಬರಿಗೆ ಹಲವು ಹುದ್ದೆ ಪಡೆದಿರುವುದರಿಂದ ಸಮಸ್ಯೆ ಆಗುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರ ಬಳಿ ಪಿಡಬ್ಲ್ಯೂಡಿ ಸಚಿವ ಸತೀಶ್ ಜಾರಕಿಹೊಳಿ ಈ ಕುರಿತು ಪ್ರಸ್ತಾಪಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಮೂಲಕ ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಾಗೂ ಸಚಿವ ಸ್ಥಾನ ಎರಡನ್ನೂ ನನಗೆ ಕೊಟ್ಟರು ನಿಭಾಯಿಸುತ್ತೇನೆ ಎಂದು ಹೊಸ ದಾಳ ಉರುಳಿಸಿದ್ದಾರೆ.
ಹೌದು ರಾಜ್ಯಕ್ಕೆ ಆಗಮಿಸಿದ ಸುರ್ಜೆವಾಲಾ ಇಂದು ಬೆಂಗಳೂರಲ್ಲಿ ಒನ್ ಟು ಒನ್ ಸಭೆ ನಡೆಸಿದ್ದು, ಸುರ್ಜೆವಾಲಾ ಜೊತೆ ಚರ್ಚೆಯ ವೇಳೆ ಸತೀಶ್ ಜಾರಕಿಹೊಳಿ ಒಬ್ಬರಿಗೆ ಹಲವು ಹುದ್ದೆ ಪಡೆದಿರುವುದರಿಂದ ಸಮಸ್ಯೆ ಆಗುತ್ತಿದೆ. ಮುಂದೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಬರುತ್ತಿದೆ. ಈಗಿನಿಂದಲೇ ಪಕ್ಷ ಸಂಘಟನೆ ಆಗಬೇಕು. ತಳಮಟ್ಟದಲ್ಲಿ ಸಂಘಟನೆ ಆದರೆ ಸೀಟು ಗೆಲ್ಲಲು ಸಾಧ್ಯವಾಗುತ್ತದೆ ಒಬ್ಬರೇ ಹಲವುದೇ ಇರುವುದರಿಂದ ಕಷ್ಟ ಆಗಲಿದೆ. ಹಿತ ಪಕ್ಷ ಸಂಘಟನೆ ಕಡೆಗೂ ನೋಡೋದಕ್ಕೆ ಆಗಲ್ಲ ಹಾಗಾಗಿ ನಮ್ಮ ಅಭಿಪ್ರಾಯ ಬದಲಾವಣೆ ಒಳ್ಳೆಯದು ಎಂದು ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಇನ್ನು ಕೆಪಿಸಿಸಿ ಪಟ್ಟದ ಬಗ್ಗೆಯೂ ಸುರ್ಜೆವಾಲ ಅವರ ಬಳಿ ಪ್ರಸ್ತಾಪಿಸಿದ್ದು ಮಲ್ಲಿಕಾರ್ಜುನ ಖರ್ಗೆಯವರ ಮುಂದೆಯೂ ಈ ವಿಚಾರವಾಗಿ ಹೇಳಿದ್ದೇನೆ. ರಾಹುಲ್ ಗಾಂಧಿ ಅವರಿಗೂ ಇದನ್ನು ವಿವರಿಸಿದ್ದೇವೆ ಎಂದು ಸತೀಶ್ ಜಾರಕಿಹೊಳಿ ಮಾತಿಗೆ ಸುರ್ಜೆವಾಲ ಪ್ರತಿಕ್ರಿಯೆ ನೀಡಿದ್ದು ನೀವು ಹೇಳಿದಂತೆಯೇ ಪಕ್ಷ ಸಂಘಟನೆ ಬಹಳ ಮುಖ್ಯವಾಗಿದೆ ಪಕ್ಷದ ಹಿತ ದೃಷ್ಟಿಯಿಂದ ನಿಮ್ಮ ಸಲಹೆ ಕೂಡ ತುಂಬಾ ಒಳ್ಳೆಯದಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಕ್ಯಾನ್ಸರ್ ಬರುವುದಕ್ಕಿಂತ ಮುಂಚೆ ಎಚ್ಚೆತ್ತುಕೊಳ್ಳಬೇಕಲ್ವಾ? ಥರ್ಡ್ ಫೋರ್ತ್ ಸ್ಟೇಜ್ ಬಂದರೆ ಆಗ ಕಷ್ಟ ಆಗುತ್ತೆ. ನಮ್ಮ ಇಲಾಖೆ ಬಗ್ಗೆ ಸೃಜಯವಾಲರ ಬಳಿ ಮಾತನಾಡಿದ್ದಾನೆ ಶಾಸಕರು ಆರಂಭ ಮಾಡಿದ್ದಕ್ಕೆ ನಮ್ಮನ್ನು ಕರೆದಿದ್ದರು ನಮ್ಮ ತಪ್ಪುಗಳನ್ನು ಹೇಳಿದರೆ ಅಲ್ವಾ ನಮಗೂ ಗೊತ್ತಾಗೋದು ಎಂದು ಸಭೆಯ ಬಳಿಕ ಮಾಧ್ಯಮಗಳಿಗೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದರು.