ಬೆಂಗಳೂರು : ನಿನ್ನೆ ಡಿಕೆ ಸುರೇಶ್ ಆಪ್ತನ ಮನೆಯ ಮೇಲೆ ಐಟಿ ಅಧಿಕಾರಿಗಳ ದಾಳಿ ನಡೆಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಡಿಕೆ ಸುರೇಶ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು ಐಟಿ ಹಾಗೂ ಇಡಿ ಬಿಜೆಪಿ ಹಾಗೂ ದೇವೇಗೌಡರ ಕೈಗೊಂಬೆಯಾಗಿವೆ ಎಂದು ಆಕ್ರೋಶ ಹೊರಹಾಕಿದರು.
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಸರ್ಜಾಪುರದಲ್ಲಿ ಡಿಕೆ ಸುರೇಶ್ ಹೇಳಿಕೆ ನೀಡಿದ್ದು, ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ನಮ್ಮ ಮೇಲೆ ಐಡಿ ಇಡಿ ದಾಳಿ ನಡೆಸುತ್ತಿದ್ದಾರೆ ಎಂದು ಸರ್ಜಾಪುರ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ತೀವ್ರವಾಗಿ ವಾಗ್ದಾಳಿ ನಡೆಸಿದರು.
ಐಟಿ ಇಡಿ ಅಧಿಕಾರಿಗಳ ಮುಖಾಂತರ ಕಾರ್ಯಕರ್ತರನ್ನು ಬೆದರಿಸುತ್ತಿದ್ದಾರೆ.ನಿನ್ನೆ ಐಟಿ ಅಧಿಕಾರಿಗಳು ನಮ್ಮ ಮುಖಂಡರನ್ನು ಟಾರ್ಗೆಟ್ ಮಾಡಿದ್ದರು. ಐಟಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತಿದ್ದೇನೆ. ಬೆದರಿಕೆ ಹಾಕುವುದು ಬಿಜೆಪಿ ಪರವಾಗಿ ಕೆಲಸ ಮಾಡುವುದು ಸರಿಯಲ್ಲ. ಬಿಜೆಪಿಗವ್ರು ಮಾಡುವ ತಂತ್ರಗಾರಿಕೆ ಅಕ್ಷಮ್ಯ ಅಪರಾಧ. ಎಂದು ವಾಗ್ದಾಳಿ ನಡೆಸಿದರು.
ಐಟಿ ಹಾಗೂ ಇಡಿ ಬಿಜೆಪಿ ಮತ್ತು ಎಚ್ ಡಿ ದೇವೇಗೌಡರ ಕೈಗೊಂಬೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಆರೋಪ ಮಾಡುವುದು ನಡೆಯುತ್ತಿದೆ. ದೇವೇಗೌಡರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ರಾಜಕಾರಣ ಮಾಡುತ್ತಿದ್ದಾರೆ ಎಂದು ಸರ್ಜಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.ದೇವೇಗೌಡರು ಸುಳ್ಳಾಕ ರಾಜಕಾರಣ ಮಾಡುವುದಕ್ಕೆ ಹೆಸರುವಾಸಿ ದೇವೇಗೌಡರು ಹಿರಿಯರು ಹಾಗಾಗಿ ಅವರ ಕುರಿತು ಹೆಚ್ಚು ಮಾತನಾಡಲು ಹೋಗುವುದಿಲ್ಲ ಎಚ್ ಡಿ ದೇವೇಗೌಡ ಅವರ ಆರೋಪಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರವನ್ನು ನೀಡುತ್ತೇನೆ.