ನವದೆಹಲಿ: ಚೆಕ್, ಬ್ಯಾಂಕ್ ವರ್ಗಾವಣೆ ದಾಖಲೆ ಅಥವಾ ರಶೀದಿ ಇಲ್ಲ ಎನ್ನುವ ಕಾರಣಕ್ಕೆ ಹಣಕಾಸಿನ ವಹಿವಾಟು ನಡೆದೇ ಇಲ್ಲ ಎನ್ನಲಾಗದು ಎಂಬುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ಅಲ್ಲದೇ ಹಣದ ವಹಿವಾಟು ಎಂದ ಮೇಲೆ ಅದರಲ್ಲಿ ನಗದು ಕೂಡ ಇರಬಹುದು. ಅದು ಅಸಹಜವೇನೂ ಅಲ್ಲ ಎಂಬುದಾಗಿ ತಿಳಿಸಿದೆ.
ವ್ಯಕ್ತಿಯೊಬ್ಬ ಅಧಿಕೃತ ವಿಧಾನಗಳ ಮೂಲಕ ಅಂದರೆ ನೆಗೋಶಿಯಬಲ್ ಇನ್ ಸ್ಟುಮೆಂಟ್ಸ್ ಅಥವಾ ಬ್ಯಾಂಕ್ ವಹಿವಾಟು ಹಣ ವರ್ಗಾವಣೆಯನ್ನು ಸಾಭೀತುಪಡಿಸಲು ಸಾಧ್ಯವಾಗದೇ ಇದ್ದರೇ, ಅಂತಹ ಮೊತ್ತವನ್ನು ನಗದು ಮೂಲಕ ಪಾವತಿಸಲಾಗಿಲ್ಲ ಎಂಬ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ವಿಪುಲ್ ಎಂ ಪಾಂಚೋಳಿ ಅವರನ್ನೊಳಗೊಂಡ ನ್ಯಾಯಪೀಠವು ಸಾಲ ಮರುಪಾವತಿ ಕುರಿತು ಸ್ಪಷ್ಟವಾಗಿ ವಚನಪತ್ರ ಇದ್ದಲ್ಲಿ ಹಾಗೆ ನಿರ್ಧರಿಸಲು ಆಗುವುದಿಲ್ಲ ಎಂಬುದಾಗಿ ಹೇಳಿದೆ.
ಕೆಲವು ಸಂದರ್ಭಗಳಲ್ಲಿ ನಗದು ವಹಿವಾಟಿಗೆ ರಶೀದಿ ತೆಗೆದುಕೊಳ್ಳುವ ಸಂದರ್ಭ ಬರಬಹುದು. ಆದರೇ ಆ ರೀತಿಯ ರಶೀದಿ ಇಲ್ಲ ಎಂಬ ಮಾತ್ರಕ್ಕೆ ಇಬ್ಬರ ನಡುವೆ ನಗದು ವಹಿವಾಟು ನಡೆದಿಲ್ಲ ಎಂಬುದಾಗಿ ಅರ್ಥೈಸಲು ಆಗೋದಿಲ್ಲ ಎಂದಿದೆ.
ಇದೇ ಸಂದರ್ಭದಲ್ಲಿ ಈ ಕುರಿತು ಜಿಯೋರಿಗೆಕುಟ್ಟಿ ಚಾಕೋ ಎಂಬುವರು ಸಲ್ಲಿಸಿರುವ ಮೇಲ್ಮನವಿ ಅರ್ಜಿಯ ವಿಚಾರಣೆಗೆ ನ್ಯಾಯಪೀಠವು ಅನುಮತಿಸಿದೆ.
ಅಂದಹಾಗೇ ತನಗೆ ವ್ಯಕ್ತಿಯೊಬ್ಬ 35,29,680 ಹಣ ನೀಡಬೇಕು. ಇಷ್ಟು ಹಣವನ್ನು ಪಾವತಿಸುವಂತೆ ವಿಚಾರಣಾ ನ್ಯಾಯಾಲಯವು ಸಾಲ ಪಡೆದ ವ್ಯಕ್ತಿಗೆ ಆದೇಶಿಸಿತ್ತು. ಆದರೇ ಹೈಕೋರ್ಟ್ ಈ ಮೊತ್ತವನ್ನು 22 ಲಕ್ಷಕ್ಕೆ ಇಳಿಸಿದೆ ಎಂಬುದಾಗಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯ ವೇಳೆಯಲ್ಲಿ ಸುಪ್ರೀಂ ಕೋರ್ಟ್ ಹೀಗೆ ತಿಳಿಸಿದೆ.
ಭಾರತ ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವುದು ಮುಂದುವರಿಕೆ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್
ನೀರಿನ ‘ಬಾಟಲ್ ಮುಚ್ಚಳ’ಗಳ ಬಣ್ಣದ ರಹಸ್ಯವೇನು ಗೊತ್ತಾ? ಇದು ಶೇ.99% ಜನರಿಗೆ ತಿಳಿದೇ ಇಲ್ಲ | Water Bottle