ಶ್ರೀಹರಿಕೋಟಾ (ಆಂಧ್ರಪ್ರದೇಶ) : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದಿಂದ ಇದೇ ಮೊದಲ ಬಾರಿಗೆ ಅತೀ ಚಿಕ್ಕ ರಾಕೆಟ್ಅನ್ನು ಇಂದು ಬೆಳಗ್ಗೆ 9:18ರ ಸುಮಾರಿಗೆ ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಈ ಎಸ್ಎಸ್ಎಲ್ವಿ-ಡಿ1 (SSLV-D1) ಭೂ ವೀಕ್ಷಣಾ ಉಪಗ್ರಹ ಮತ್ತು ವಿದ್ಯಾರ್ಥಿಗಳು ನಿರ್ಮಿಸಿದ ಉಪಗ್ರಹವನ್ನು ಹೊತ್ತೊಯ್ಯುವ ತನ್ನ ಚಿಕ್ಕ ರಾಕೆಟ್ ಆಗಿದೆ.
ಇದೇ ಮೊದಲ ಬಾರಿಗೆ ಇಸ್ರೋ ಸಣ್ಣ ಉಪಗ್ರಹ ಉಡಾವಣಾ ವಾಹನ(ಎಸ್ಎಸ್ಎಲ್ವಿ) ವನ್ನು ಉಡಾವಣೆ ಮಾಡಿದೆ. ಇದನ್ನು ಭೂಮಿಯ ಕಡಿಮೆ ಕಕ್ಷೆಯಲ್ಲಿ ಉಪಗ್ರಹಗಳ ನಿಯೋಜನೆಗೆ ಬಳಸಲಾಗುತ್ತದೆ.
75ನೇ ಸ್ವಾತಂತ್ರ್ಯ ವಾರ್ಷಿಕೋತ್ಸವದ ಅಂಗವಾಗಿ ನಿರ್ಮಿಸಿದ ಈ ಉಪಗ್ರಹವನ್ನು 75 ಶಾಲೆಗಳ 750 ವಿದ್ಯಾರ್ಥಿಗಳು ರೂಪಿಸಿದ್ದಾರೆ. ಇದಕ್ಕೆ ಆಜಾದಿ ಸ್ಯಾಟ್ ಎಂದು ಹೆಸರಿಸಲಾಗಿದೆ.
#WATCH ISRO launches SSLV-D1 carrying an Earth Observation Satellite & a student-made satellite-AzaadiSAT from Satish Dhawan Space Centre, Sriharikota
(Source: ISRO) pic.twitter.com/A0Yg7LuJvs
— ANI (@ANI) August 7, 2022
ಈ SSLV ರಾಕೆಟ್ 34 ಮೀ ಎತ್ತರವಿದ್ದು, PSLV ಗಿಂತ ಸುಮಾರು 10 ಮೀ. ಕಡಿಮೆ ಇದೆ. PSLVಗೆ ಹೋಲಿಸಿದರೆ, 2.8 ಮೀಟರ್ಗಳಷ್ಟು ವಾಹನದ ವ್ಯಾಸ (diameter) ವನ್ನು ಹೊಂದಿದೆ.
ಎಸ್ಎಸ್ಎಲ್ವಿ 120 ಟನ್ಗಳ ಲಿಫ್ಟ್-ಆಫ್ ತೂಕ ಹೊಂದಿದ್ದರೆ, ಪಿಎಸ್ಎಲ್ವಿ 320 ಟನ್ಗಳನ್ನು ಹೊಂದಿದೆ. ಅಲ್ಲದೇ, ಇದು ಸುಮಾರು 1,800 ಕೆಜಿಯಷ್ಟು ಪೇಲೋಡ್ಗಳನ್ನು ಸಾಗಿಸಬಲ್ಲದು.
Big news: CSIR ಮೊದಲ ಮಹಿಳಾ ಮಹಾನಿರ್ದೇಶಕರಾಗಿ ಹಿರಿಯ ವಿಜ್ಞಾನಿ ʻನಲ್ಲತಂಬಿ ಕಲೈಸೆಲ್ವಿʼ ನೇಮಕ !
BIGG NEWS : ರಾಜ್ಯಾದ್ಯಂತ ಭಾರೀ ಮಳೆಗೆ 70 ಮಂದಿ ಸಾವು, 3,559 ಮನೆಗಳು ಸಂಪೂರ್ಣ ಹಾನಿ : ಸಿಎಂ ಬೊಮ್ಮಾಯಿ