ಸಿರಿಯಾ : ಡಮಾಸ್ಕಸ್ನಲ್ಲಿರುವ ಇರಾನ್ ರಾಯಭಾರ ಕಚೇರಿಯ ಮೇಲೆ ಸೋಮವಾರ ತಡರಾತ್ರಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್ನ ರೆವಲ್ಯೂಷನರಿ ಗಾರ್ಡ್ಸ್ನ ಇಬ್ಬರು ಜನರಲ್ಗಳು ಸೇರಿದಂತೆ ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ.
ಕುಡ್ಸ್ ಫೋರ್ಸ್ನ ಹಿರಿಯ ಕಮಾಂಡರ್ ಬ್ರಿಗೇಡಿಯರ್ ಜನರಲ್ ಮೊಹಮ್ಮದ್ ರೆಜಾ ಜಹೇದಿ ಮತ್ತು ಅವರ ಡೆಪ್ಯೂಟಿ ಬ್ರಿಗೇಡಿಯರ್ ಜನರಲ್ ಮೊಹಮ್ಮದ್ ಹಾದಿ ಹಾಜಿ-ರಹೀಮಿ ಈ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.
ದಾಳಿಯಲ್ಲಿ ತನ್ನ ಏಳು ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಎಂದು ರೆವಲ್ಯೂಷನರಿ ಗಾರ್ಡ್ಸ್ ತಿಳಿಸಿದೆ.
ಇರಾನ್ ಮತ್ತು ಸಿರಿಯಾ ಸರ್ಕಾರಗಳು ಈ ದಾಳಿಯನ್ನು ಖಂಡಿಸಿವೆ. ಡಮಾಸ್ಕಸ್ನ ಪಶ್ಚಿಮ ಮೆಝೆಹ್ ಜಿಲ್ಲೆಯಲ್ಲಿರುವ ಕಾನ್ಸುಲೇಟ್ ಕಟ್ಟಡವನ್ನು ಇಸ್ರೇಲ್ ವಿಮಾನಗಳು ಗುರಿಯಾಗಿಸಿಕೊಂಡಿವೆ ಎಂದು ಸಿರಿಯನ್ ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಅದರ ವಾಯು ರಕ್ಷಣಾ ಪಡೆಗಳು ಕೆಲವು ಇಸ್ರೇಲಿ ಕ್ಷಿಪಣಿಗಳನ್ನು ಹೊಡೆದುರುಳಿಸಿದರೂ, “ಇತರರು ಅದನ್ನು ದಾಟಿ ಇಡೀ ಕಟ್ಟಡವನ್ನು ನಾಶಪಡಿಸಿದರು, ಒಳಗಿದ್ದ ಎಲ್ಲರನ್ನೂ ಹತ್ಯೆ ಮಾಡಿದೆ ಎಂದು ಅದು ಹೇಳಿದೆ.