ಜೆರುಸಲೇಂ: ಇಸ್ರೇಲ್‌ನ ಹೆಮ್ಮೆಯ ‘ಐರನ್ ಡೋಮ್’ ಮತ್ತು ಇತರ ವಾಯು ರಕ್ಷಣಾ ವ್ಯವಸ್ಥೆಗಳನ್ನು ಭೇದಿಸಿರುವ ಇರಾನ್‌ನ ಬ್ಯಾಲಿಸ್ಟಿಕ್ ಕ್ಷಿಪಣಿಗಳು ದಕ್ಷಿಣ ಇಸ್ರೇಲ್‌ನ ಜನವಸತಿ ಪ್ರದೇಶಗಳ ಮೇಲೆ ಅಪ್ಪಳಿಸಿವೆ. ಅರಾದ್ (Arad) ಮತ್ತು ಡಿಮೋನಾ (Dimona) ನಗರಗಳ ಮೇಲೆ ನಡೆದ ಈ ನೇರ ದಾಳಿಯಲ್ಲಿ ಕನಿಷ್ಠ 100 ಜನರು ಗಾಯಗೊಂಡಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ಶನಿವಾರ ರಾತ್ರಿ ಇರಾನ್ ಉಡಾಯಿಸಿದ ಕನಿಷ್ಠ ಎರಡು ಪ್ರಬಲ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತಡೆಯಲು ಇಸ್ರೇಲ್‌ನ ರಕ್ಷಣಾ ವ್ಯವಸ್ಥೆಗಳು ವಿಫಲವಾಗಿವೆ. ನೂರಾರು ಕೆಜಿ ಸ್ಫೋಟಕ ಹೊತ್ತಿದ್ದ ಕ್ಷಿಪಣಿಗಳು ನೇರವಾಗಿ ವಸತಿ ಸಮುಚ್ಚಯಗಳ ಮೇಲೆ ಬಿದ್ದಿವೆ.ಅರಾದ್ ನಗರವೊಂದರಲ್ಲೇ 75 ಜನರು ಗಾಯಗೊಂಡಿದ್ದು, ಇವರಲ್ಲಿ 10 ಜನರ ಸ್ಥಿತಿ ಚಿಂತಾಜನಕವಾಗಿದೆ. ಡಿಮೋನಾದಲ್ಲಿ 10 ವರ್ಷದ ಬಾಲಕ ಸೇರಿದಂತೆ 33 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಬೀರ್ಶೆಬಾದ ಸೊರೊಕಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಸ್ರೇಲ್‌ನ ಅತ್ಯಂತ ಸೂಕ್ಷ್ಮ ಪ್ರದೇಶವಾದ ‘ಡಿಮೋನಾ ಪರಮಾಣು ಸಂಶೋಧನಾ ಕೇಂದ್ರ’ದ ಸಮೀಪವೇ ಈ ದಾಳಿ ನಡೆದಿದೆ. ಇರಾನ್‌ನ ನಟಾನ್ಜ್ ಪರಮಾಣು ಕೇಂದ್ರದ ಮೇಲೆ ನಡೆದ ದಾಳಿಗೆ ಪ್ರತಿಕಾರವಾಗಿ ಈ ಕ್ರಮ ಕೈಗೊಂಡಿರುವುದಾಗಿ ಇರಾನ್ ಘೋಷಿಸಿದೆ.ದಾಳಿಯ ತೀವ್ರತೆಗೆ ಹಲವು ಕಟ್ಟಡಗಳು ಭಾಗಶಃ ಕುಸಿದಿದ್ದು, ರಸ್ತೆಗಳಲ್ಲಿ ದೊಡ್ಡ ಹೊಂಡಗಳು ನಿರ್ಮಾಣವಾಗಿವೆ. ಸ್ಫೋಟದ ನಂತರ ಹಲವಾರು ಕಡೆ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸುತ್ತಿದ್ದಾರೆ.
🚨 UPDATE: MASS CASUALTY INCIDENT, ARAD#Israel #Breaking #Iran
New details from the scene in Arad:
▪️ 70 injured reported
▪️ Several in serious condition
▪️ Among them: a 5-year-old girl
▪️ People reported trapped under debris
▪️ Helicopters deployed for evacuation
▪️ Strike… pic.twitter.com/kigZaZM1VC— Mossad Commentary (@MOSSADil) March 21, 2026








