ದಕ್ಷಿಣಕನ್ನಡ : ಧರ್ಮಸ್ಥಳದ ವಿವಿಧೆಡೆ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ತಿರುವು ಸಿಕ್ಕಿದ್ದು, ಇಂದು ಮತ್ತೊಂದು ಹೊಸ ಜಾಗದಲ್ಲಿ ಎಸ್ ಐಟಿ ತಂಡ ಶೋಧಕಾರ್ಯ ಆರಂಭಿಸಿದೆ.ಬಾಹುಬಲಿ ಮೂರ್ತಿ ಇರುವ ರತ್ನಗಿರಿ ಬೆತ್ತದ ತಪ್ಪಲಿನಲ್ಲಿ ದೂರುದಾರ ತೋರಿಸಿರುವ 16ನೇ ಪಾಯಿಂಟ್ ನಲ್ಲಿ ಎಸ್ ಐಟಿ ತಂಡ ಅಸ್ಥಿಪಂಜರಕ್ಕಾಗಿ ಶೋಧ ಕಾರ್ಯ ನಡೆಸಿದೆ.
ಇದೀಗ ದೂರುದಾರ ಇಲ್ಲಿ ಒಣ ಮರ ಇದೆ ಅಲ್ವಾ ಅಲ್ಲಿಯೇ ನಾನು ಶವ ಹೂತು ಹಾಕಿದ್ದೇನೆ ಎಂದು ದೂರುದಾರ ಮಾತನಾಡಿರುವ ಆಡಿಯೋ ಸಹ ಇದೀಗ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಮಹಾ ಮಸ್ತಕಾಭಿಷೇಕ ಸಂದರ್ಭದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕೂಡ ಅಲ್ಲಿ ಮಾಡಲಾಗಿತ್ತು. ಇದೀಗ ಅಲ್ಲಿರುವ ಒಣಮರದ ಕಡೆಗೆ ಕೈ ತೋರಿಸಿ ಅಲ್ಲಿಯೇ ಶವ ಹೂತು ಹಾಕಿದ್ದೇನೆ ಎಂದು ದೂರುದಾರ ತಿಳಿಸಿದ್ದಾನೆ. ಹೀಗಾಗಿ SIT ಅಧಿಕಾರಿಗಳ ತನಿಖೆ ಮತ್ತಷ್ಟು ಚುರುಕುಗೊಂಡಿದೆ.
ನಿನ್ನೆಯು ಸಹ 13ನೇ ಪಾಯಿಂಟ್ ನಲ್ಲಿ ಶೋಧ ನಡೆಸುವ ನಿರೀಕ್ಷೆ ಇತ್ತು. ಆದರೆ ಹೊಸದೊಂದು ಸ್ಥಳ 15ನೇ ಪಾಯಿಂಟ್ ನಲ್ಲಿ SIT ಶೋಧ ನಡೆಸಿತ್ತು. ಇದೀಗ ದೂರುದಾರ ತೋರಿಸಿರುವ 16ನೇ ಪಾಯಿಂಟ್ ನಲ್ಲಿ ಉತ್ಖನನ ನಡೆಸಲಾಗುತ್ತಿದೆ. ಮಾಸ್ಕ್ ಮ್ಯಾನ್ ದೂರುದಾರ ತೋರಿಸಿರುವ ಜಾಗ ಧರ್ಮಸ್ಥಳದ ಬಾಹುಬಲಿ ಮೂರ್ತಿ ಇರುವ ರತ್ನಗಿರಿ ಬೆಟ್ಟದ ತಪ್ಪಲಿನಲ್ಲಿ 16ನೇ ಪಾಯಿಂಟ್ ಎಂದು ಗುರುತಿಸಿ ಶೋಧಕಾರ್ಯಾಚರಣೆ ನಡೆಸಲಾಗುತ್ತಿದೆ.