ಬೆಂಗಳೂರು : ಮಂಡ್ಯ ತಾಲೂಕಿನ ಕೆರೆಗೋಡು ಗ್ರಾಮದಲ್ಲಿ ಹನುಮಧ್ವಜ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದ್ದು ಅಲ್ಲಿ ರಾಷ್ಟ್ರಧ್ವಜ ಹಾಗೂ ಕನ್ನಡ ಧ್ವಜ ಬಾವುಟ ಹಾರಾಟಕ್ಕೆ ಮಾತ್ರ ಅನುಮತಿ ನೀಡಲಾಗಿತ್ತು. ಆದರೆ ಇವರು ಅನುಮತಿಯನ್ನು ಉಲ್ಲಂಘಿಸಿ ಭಗವದ್ವಜ ಹಾರಿಸಿದರೆ ಅದು ತಪ್ಪಲ್ವಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಒತ್ತಾಯ ಮಾಡಿದ್ದಾರೆ ಎಂದು ಧ್ವಜವನ್ನು ಹಾರಿಸಲು ಅನುಮತಿ ಕೊಟ್ಟಿದ್ದಾರೆ. ರಾಷ್ಟ್ರಧ್ವಜ ಹಾಗೂ ಕನ್ನಡ ಧ್ವಜ ಹಾರಿಸಲು ಅನುಮತಿ ಕೊಟ್ಟಿದ್ದಾರೆ. ಟ್ರಸ್ಟ್ ನವರೆ ಮುಚ್ಚಳಿಕೆಯನ್ನು ಬರೆದುಕೊಟ್ಟಿದ್ದಾರೆ. ಆದರೆ ಮುಚ್ಚಳಕ್ಕೆ ಬರೆದು ಯಾಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ? ಎಂದು ಪ್ರಶ್ನಿಸಿದರು.
ಈ ಒಂದು ಪ್ರಕರಣವನ್ನು ರಾಜಕೀಯಗೊಳಿಸಿ ಅದರ ಲಾಭ ಪಡೆಯಲು ಉದ್ದೇಶಿಸಿದ್ದಾರೆ. ಸಮಾಜದಲ್ಲಿ ಅಶಾಂತಿಯನ್ನು ಉಂಟುಮಾಡುವ ಪ್ರಯತ್ನ ಇದು ಅವರು ಏನು ಬೇಕಾದರೂ ಮಾಡಲಿ ಜನ ತೀರ್ಮಾನಿಸುತ್ತಾರೆ. ನಿಯಮ ಉಲ್ಲಂಘಿಸಿ ಭಗವಧ್ವಜ ಹಾರಿಸಿದರೆ ತಪ್ಪಲ್ವಾ? ರಾಷ್ಟ್ರಧ್ವಜ ಕನ್ನಡದ ಧ್ವಜಕ್ಕೆ ಮಾತ್ರ ಅನುಮತಿ ಕೊಡಲಾಗಿದೆ.ಆದರೆ ಭಗವಾಧ್ವಜ ಹಾರಿಸಿದ್ದಾರೆ ಎಂದರು.
ಅನುಮತಿ ಕೊಟ್ಟಿದ್ದು, ರಾಷ್ಟ್ರಧ್ವಜ ಹಾರಿಸಲು ಹಾಗೂ ಕನ್ನಡದ ಹಾರಿಸೋಕೆ ಅನುಮತಿ ಕೊಟ್ಟಿದ್ದು ಅಲ್ಲದೆ ಮುಚ್ಚಳಕ್ಕೆ ಬರೆದುಕೊಟ್ಟಿದ್ದಾರೆ. ಮುಚ್ಚಳಿಕೆ ಬರೆದು ಕೊಟ್ಟು ಯಾವುದೇ ಧರ್ಮ ಹಾಗೂ ಯಾವುದೇ ಪಕ್ಷದ ಬಾವುಟವನ್ನು ಹಾರಿಸಬಾರದು ಅಂತ ಅನುಮತಿ ಕೊಟ್ಟಿದ್ದಾರೆ. ಅದಾದ ಮೇಲೆ ಅದಕ್ಕೆ ವಿರುದ್ಧವಾಗಿ ಯಾಕೆ ನಡೆದುಕೊಂಡರು? ಮುಚ್ಚಳಿಕೆ. ಕೊಟ್ಟ ಮೇಲು ವಿರುದ್ಧವಾಗಿ ನಡೆದುಕೊಂಡರು ಅದರ ಅರ್ಥ ಅದನ್ನ ರಾಜಕೀಯಗೊಳಿಸಿ ರಾಜಕೀಯ ಲಾಭ ಪಡೆದುಕೊಳ್ಳುವ ದುರುದ್ದೇಶ ಹೊಂದಿದ್ದು ಸಮಾಜದಲ್ಲಿ ಅಶಾಂತಿ ಉಂಟುಮಾಡುವ ಪ್ರಯತ್ನವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.