ಮೈಸೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮೈಸೂರು ಚಲೋ ಪಾದಯಾತ್ರೆ ಆರಂಭಿಸಿರುವ ಬಿಜೆಪಿ ಜೆಡಿಎಸ್ ಪಾದಯಾತ್ರೆ ಇಂದು ಶ್ರೀರಂಗಪಟ್ಟಣ ತಲುಪಿದ್ದು, ಸಾರ್ವಜನಿಕ ಸಭೆಯಲ್ಲಿ ಮಾಡಿ ಸಚಿವ ಸಿಟಿ ರವಿ ಅವರು ರೀಡು ಹೆಸರಿನಲ್ಲಿ 1700 ಕೋಟಿ ಹೊಡೆದಿದ್ದೀರಲ್ಲ ಇದು ನಿಮ್ಮ ರಾಜಕೀಯ ಕಪ್ಪು ಚುಕ್ಕೆ ಅಲ್ಲವೆ ಸಿದ್ದರಾಮಯ್ಯನವರೇ ಎಂದು ವಾಗ್ದಾಳಿ ನಡೆಸಿದರು.
40ವರ್ಷದ ರಾಜಕೀಯ ಜೀವನದಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲ ಎಂದರು. ಸಿದ್ದರಾಮಯ್ಯ ಅವರ ಶರ್ಟ್, ಪಂಚೆ ಬಗ್ಗೆ ನಮ್ಮ ಕಾಮೆಂಟ್ ಇಲ್ಲ. ವಾಲ್ಮೀಕಿ ನಿಗಮದಲ್ಲಿ ಮಾಡಿದ್ದು ಹಗರಣ ಅಲ್ಲವಾ? ಎಂದು ಪಾದಯಾತ್ರೆಯ ಸಾರ್ವಜನಿಕ ಸಭೆಯಲ್ಲಿ ಮಾಜಿ ಸಚಿವ ಸಿಟಿ ರವಿ ಹೇಳಿಕೆ ನೀಡಿದರು.
ಶ್ರೀರಂಗಪಟ್ಟಣದಲ್ಲಿ ಮೈಸೂರು ಚಲೋ ಪಾದಯಾತ್ರೆಯ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಅರ್ಕಾವತಿಯಲ್ಲಿ ರೀಡೂ ಅಂತ ಪ್ರಯೋಗ ಮಾಡಿದರು. ರೀಡೂ ಪಿತಾಮಹ ಸಿದ್ದರಾಮಯ್ಯ 800 ಎಕರೆ ಡಿ ನೋಟಿಫೈ ಮಾಡಿದ್ರು ಎಂದು ಅವರ ವಿರುದ್ಧ ಗಂಭೀರ ಆರೋಪ ಮಾಡಿದರು.
ಒಂದು ಎಕರೆಗೆ ಸಿದ್ದರಾಮಯ್ಯ 2 ಕೋಟಿ ರೂಪಾಯಿ ಅಷ್ಟೇ ಪಡೆದಿದ್ದಾರೆ.1700 ಕೋಟಿಗೂ ಹೆಚ್ಚು ಹಣವನ್ನು ರೀಡೂ ಹೆಸರಿನಲ್ಲಿ ಹೊಡೆದರು. ಇದು ಕಪ್ಪು ಚುಕ್ಕೆ ಅಲ್ಲವಾ ಸಿಎಂ ಸಿದ್ದರಾಮಯ್ಯ ಅವರೇ? ಅಲ್ಪಸಂಖ್ಯಾತ ಇಲಾಖೆಯಲ್ಲಿ ಸಿಎಂ ಶಿಷ್ಯ ಜಮೀರ್ 600 ಕೋಟಿ ಲೂಟಿ ಮಾಡಿದ್ದಾರೆ. ಕಾರ್ಮಿಕ ಇಲಾಖೆಯಲ್ಲಿ ಒಬ್ಬನಿಗೆ ರೂ.3,000 ಕೊಟ್ಟು ಹಣ ಲಪಟಾಯಿಸಿದ್ದಾರೆ ಎಂದು ಪಾದಯಾತ್ರೆಯ ಸಾರ್ವಜನಿಕ ಸಭೆಯಲ್ಲಿ ಮಾಜಿ ಸಚಿವ ಸಿ ಟಿ ರವಿ ಹೇಳಿಕೆ ನೀಡಿದರು.