ಬೆಂಗಳೂರು: ನಗರದಲ್ಲಿ ಭಾರೀ ಮಳೆಯಿಂದಾಗಿ ರಸ್ತೆಗಳೆಲ್ಲ ಜಲಾವೃತಗೊಂಡಿದ್ದಾವೆ. ವಾಹನ ಸವಾರರು ಪರದಾಡಿದ್ದಾರೆ. ಹಲವೆಡೆ ಅಪಾರ್ಮೆಂಟ್ ಗಳು ಮುಳುಗಡೆಯಾಗಿದ್ದಾವೆ. ಈ ವೀಡಿಯೋ ಶೇರ್ ಮಾಡಿರುವಂತ ಮಾಜಿ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಅವರು, ಡಿಸಿಎಂ ಡಿ.ಕೆ ಶಿವಕುಮಾರ್ ಅವರೇ ಇದೇನಾ ನಿಮ್ಮ ಬ್ರಾಂಡ್ ಬೆಂಗಳೂರು ಅಂತ ಕೇಳಿದ್ದಾರೆ.
ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ , ಇದೇನಾ ನಿಮ್ಮ ಬ್ರಾಂಡ್ ಬೆಂಗಳೂರು? ಎಂದು ಕೇಳಿದ್ದಾರೆ.
ಜನರಿಗೆ ಉಚಿತ, ಖಚಿತ, ನಿಶ್ಚಿತ ಎಂದು ಟೋಪಿ ಹಾಕಿ ಈಗ ಏನು ಬೊಟ್ ಭಾಗ್ಯವನ್ನು ಕೊಡುತ್ತೀರೋ ? ಎಂದು ಪ್ರಶ್ನಿಸಿದ್ದಾರೆ.
ಸ್ಕ್ಯಾಮ್ ಗಳಿಂದ ನಿಮಗೆ ಪುರುಸೊತ್ತಿ ಸಿಕ್ಕಿದಲ್ಲಿ ಸ್ವಲ್ಪ ಜನರ ಬಗ್ಗೆ ಕೂಡ ಗಮನ ಹರಿಸಿ ಸ್ವಾಮೀ ಎಂಬುದಾಗಿ ಒತ್ತಾಯಿಸಿದ್ದಾರೆ.
ಮಾನ್ಯ ಉಪಮುಖ್ಯಮಂತ್ರಿ @DKShivakumar ಅವರೇ , ಇದೇನಾ ನಿಮ್ಮ ಬ್ರಾಂಡ್ ಬೆಂಗಳೂರು?
ಜನರಿಗೆ ಉಚಿತ, ಖಚಿತ, ನಿಶ್ಚಿತ ಎಂದು ಟೋಪಿ ಹಾಕಿ ಈಗ ಏನು ಬೊಟ್ ⛵️ ಭಾಗ್ಯವನ್ನು ಕೊಡುತ್ತೀರೋ ?
ಸ್ಕ್ಯಾಮ್ ಗಳಿಂದ ನಿಮಗೆ ಪುರುಸೊತ್ತಿ ಸಿಕ್ಕಿದಲ್ಲಿ ಸ್ವಲ್ಪ ಜನರ ಬಗ್ಗೆ ಕೂಡ ಗಮನ ಹರಿಸಿ ಸ್ವಾಮೀ. pic.twitter.com/xpE2DxNlf6— Sadananda Gowda (@DVSadanandGowda) October 15, 2024
ಚಿತ್ರದುರ್ಗದಲ್ಲಿ ಮನಕಲಕುವ ಘಟನೆ : ಪತ್ನಿ ಸಾವಿನಿಂದ ನೊಂದು ಪತಿಯೂ ನೇಣು ಬಿಗಿದುಕೊಂಡು ಆತ್ಮಹತ್ಯೆ!
BREAKING : ‘ಮುಡಾ’ ಹಗರಣದ ದಾಖಲೆ ತೆಗಿಸಿದ್ದೆ ಡಿಸಿಎಂ ಡಿಕೆ ಶಿವಕುಮಾರ್ : ಜನಾರ್ಧನ್ ರೆಡ್ಡಿ ಹೊಸ ಬಾಂಬ್!