ಬೆಂಗಳೂರು: ನಿನ್ನೆ ಕಾರ್ಯಕ್ರಮವೊಂದರಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಅವರು ಕುಂಕುಮ ಹಣೆಗೆ ಇಟ್ಕೊಳ್ಳೋದಕ್ಕೆ ನಿರಾಕರಿಸಿದ್ದರು. ಸೋ ಆರ್.ಅಶೋಕ್ ಗೆ ಕುಂಕುಮ ಎಂದರೆ ಅಲರ್ಜಿ, ಅಸಹ್ಯವೇ ಎಂಬುದಾಗಿ ಕಾಂಗ್ರೆಸ್ ಪ್ರಶ್ನಿಸಿದೆ.
ಈ ಕುರಿತು ಎಕ್ಸ್ ಮಾಡಿರುವಂತ ಕರ್ನಾಟಕ ಕಾಂಗ್ರೆಸ್ ಪಕ್ಷವು, ಆರ್.ಅಶೋಕ್ ಅವರಿಗೆ ಕುಂಕುಮ ಎಂದರೆ ಅಲರ್ಜಿಯೇ, ಅಸಹ್ಯವೇ? ಕುಂಕುಮ ಹಚ್ಚಲು ಬಂದರೆ ಹೌಹಾರಿ ನಿರಾಕರಿಸುವ ಅಶೋಕ್ ಅವರ ಮೂಲಕ ಬಿಜೆಪಿಯವರ ಬೂಟಾಟಿಕೆಯ ಹುಸಿ ಧಾರ್ಮಿಕತೆ ನಾಟಕ ಬಯಲಾಗಿದೆ ಎಂದಿದೆ.
ಕೇಸರಿ ಶಾಲು, ಕುಂಕುಮ ಮುಂತಾದವುಗಳು ಬಿಜೆಪಿಗರ ಯುವ ಸಮುದಾಯವನ್ನು ದಿಕ್ಕು ತಪ್ಪಿಸುವ ಟೂಲ್ ಕಿಟ್ ಹೊರತು ಬಿಜೆಪಿಗರ ಅಸಲಿ ಆಚರಣೆಯಲ್ಲ ಎಂಬುದಾಗಿ ಕಿಡಿಕಾರಿದೆ.
ಬೊಮ್ಮಾಯಿಯವರು ಕುಂಕುಮಾವನ್ನು ಉಜ್ಜಿ ಉಜ್ಜಿ ಅಳಿಸಿಕೊಂಡರೆ, ಅಶೋಕ್ ಅವರು ಹಚ್ಚಿಕೊಳ್ಳಲು ನಿರಾಕರಿಸುತ್ತಾರೆ, ನಿಮ್ಮ ನಾಯಕರಿಗೆ ಕುಂಕುಮಕ್ಕಿಂತ ಮೇಕಪ್ ಮುಖ್ಯವೇ ಬಿಜೆಪಿ? ಎಂದು ಪ್ರಶ್ನಿಸಿದೆ.
,@RAshokaBJP ಅವರಿಗೆ
ಕುಂಕುಮ ಎಂದರೆ ಅಲರ್ಜಿಯೇ, ಅಸಹ್ಯವೇ?ಕುಂಕುಮ ಹಚ್ಚಲು ಬಂದರೆ ಹೌಹಾರಿ ನಿರಾಕರಿಸುವ ಅಶೋಕ್ ಅವರ ಮೂಲಕ ಬಿಜೆಪಿಯವರ ಬೂಟಾಟಿಕೆಯ ಹುಸಿ ಧಾರ್ಮಿಕತೆ ನಾಟಕ ಬಯಲಾಗಿದೆ.
ಕೇಸರಿ ಶಾಲು, ಕುಂಕುಮ ಮುಂತಾದವುಗಳು ಬಿಜೆಪಿಗರ ಯುವ ಸಮುದಾಯವನ್ನು ದಿಕ್ಕು ತಪ್ಪಿಸುವ ಟೂಲ್ ಕಿಟ್ ಹೊರತು ಬಿಜೆಪಿಗರ ಅಸಲಿ ಆಚರಣೆಯಲ್ಲ.… pic.twitter.com/5ar2CQEq5a
— Karnataka Congress (@INCKarnataka) March 25, 2024
`ಅಂತರ್ಜಾತಿ ವಿವಾಹ’ವಾಗುವವರಿಗೆ ಗುಡ್ ನ್ಯೂಸ್ : ರಾಜ್ಯ ಸರ್ಕಾರದಿಂದ ಸಿಗಲಿದೆ 2 ಲಕ್ಷ ರೂ.ವರೆಗೆ ಪ್ರೋತ್ಸಾಹಧನ
ಭಾರತದಲ್ಲಿ ಶ್ರೀಮಂತರ ಸಂಖ್ಯೆಯಲ್ಲಿ ಶೇ.75 ಕ್ಕಿಂತ ಹೆಚ್ಚಳ : ಇದೇ ಮೊದಲ ಬಾರಿಗೆ 1,300 ದಾಟಿದ ಸಿರಿವಂತರ ಸಂಖ್ಯೆ!