ಹುಬ್ಬಳ್ಳಿ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಶನಿ ಎಂದು ಕರೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ ಕಾರಿದ್ದು, ಇಂದಿರಾ ಗಾಂಧಿ ಅವರ ಜಾಗಕ್ಕೆ ಮೋದಿ ಬಂದು ಕುಳಿತಿದ್ದಾರೆ ಎನ್ನುವುದಕ್ಕೆ ಪ್ರಧಾನ ಮಂತ್ರಿ ಹುದ್ದೆ ಏನು ಗಾಂಧಿ ಕುಟುಂಬದ ಸ್ವತ್ತ ಎಂದು ಆಕ್ರೋಶ ಅವರ ಹಾಕಿದರು.
ಹುಬ್ಬಳ್ಳಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಕುಮಾರ ನಾಯಕ ಮೋದಿ ವಿರುದ್ಧ ನಿಂದನೆಗಳನ್ನು ಮಾಡುತ್ತಿದ್ದಾರೆ ಟೀಕೆಯಲ್ಲ. ಹಿಂದೆ ಸಿದ್ದರಾಮಯ್ಯ ಅವರು 2013ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದರು. ಆನಂತರ ಮುಖ್ಯಮಂತ್ರಿ ಆದರು ನಂತರ ಒಂದೇ ವರ್ಷದಲ್ಲಿ 2014ರಲ್ಲಿ ಲೋಕಸಭೆ ಚುನಾವಣೆ ಬಂದಾಗ ಮೋದಿ ವಿರುದ್ಧ ಅತ್ಯಂತ ಕೆಟ್ಟದಾಗಿ ನಿಂದನಾತ್ಮಕ ಭಾಷೆಯಲ್ಲಿ ಮಾತನಾಡಿದರು. ಆಗ ಇಡೀ ದೇಶದಲ್ಲಿ ಕಾಂಗ್ರೆಸ್ ಮಣ್ಣುಮುಕ್ಕಿತು.
ಮೊದಲ ಬಾರಿಗೆ ಜವರಹಾಲ್ ನೆಹರು ಪ್ರಧಾನಮಂತ್ರಿಯ ಆದರೂ. ಅದರ ನಂತರ ಅವರ ಪುತ್ರಿ ಇಂದಿರಾಗಾಂಧಿ ಅವರು ಪ್ರಧಾನ ಮಂತ್ರಿ ಆದ ಬಳಿಕ ರಾಜೀವ್ ಗಾಂಧಿ ಅವರು ಪ್ರಧಾನ ಮಂತ್ರಿಯಾದರು.ಹಾಗೆಂದ ಮಾತ್ರಕ್ಕೆ ಪ್ರಧಾನಮಂತ್ರಿ ಹುದ್ದೆ ಏನು ಗಾಂಧಿ ಕುಟುಂಬದ ಸ್ವತ್ತ? ಎಂದು ರಮೇಶ್ ಕುಮಾರ್ ವಿರುದ್ಧ ಪ್ರಹ್ಲಾದ್ ಜೋಶಿ ಕಿಡಿಕಾರಿದರು.
ಇದೀಗ ಕಳೆದ ವರ್ಷ ಮತ್ತೆ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ. ಇದೀಗ ಒಂದು ವರ್ಷ ಬಳಿಕ ಮತ್ತೆ ಲೋಕಸಭೆ ಚುನಾವಣೆ ಆಗಮಿಸಿದ್ದು, ಪುನಹ ಮತ್ತೆ ಕಾಂಗ್ರೆಸ್ ಈ ಬಾರಿ ಇಡೀ ದೇಶದಲ್ಲಿ ಮಣ್ಣು ಮುಕ್ಕಲಿದೆ. ಗುಲಾಮಗಿರಿ ಮಾಡುವುದು ಅವರ ಪದ್ಧತಿ. ಇದೀಗ ರಮೇಶ್ ಕುಮಾರ ಅವರ ಬಗ್ಗೆ ಇರುವಂತಹ ಗೌರವ ಕಡಿಮೆ ಆಗಿದೆ ಎಂದು ತಿಳಿಸಿದರು.